ಕರ್ನಾಟಕ

karnataka

ETV Bharat / bharat

ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ಎಸ್‌ಐಟಿ ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಹೈಕೋರ್ಟ್​ - ADG Law and Order Davi Murugesan

ಅಂಕಿತಾ ಪೋಷಕರು ಎಸ್‌ಐಟಿ ತನಿಖೆ ನಿಧಾನಗತಿಯಿಂದ ಸಾಗುತ್ತಿದೆ, ತಮ್ಮ ಮಗಳ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕೆಂದು ಆಗ್ರಹಿಸಿದ್ದರು. ಆದರೆ ಹೈಕೋರ್ಟ್ ಎಸ್‌ಐಟಿ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

Ankita Bhandari murder case
ಅಂಕಿತಾ ಭಂಡಾರಿ ಹತ್ಯೆ ಪ್ರಕರಣ

By

Published : Dec 22, 2022, 6:32 PM IST

ಡೆಹ್ರಾಡೂನ್: ಉತ್ತರಾಖಂಡ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನ್ಯಾಯಾಲಯದಿಂದ ಹಾಗು ವಿಶೇಷ ವಕೀಲರಿಂದ ವಿಚಾರಣೆ ತೀವ್ರಗೊಂಡಿದೆ. ಸರಕಾರದಿಂದ ಅನುಮತಿ ಪಡೆದ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿದು ಬಂದಿದೆ.

ಮತ್ತೊಂದೆಡೆ ಅಂಕಿತಾ ಪೋಷಕರು ಎಸ್‌ಐಟಿ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ, ತಮ್ಮ ಮಗಳ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕೆಂದು ಆಗ್ರಹಿಸಿದ್ದರು. ಆದರೆ ಹೈಕೋರ್ಟ್ ಎಸ್‌ಐಟಿ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಎಸ್ ಐಟಿ ಆರೋಪಿಗಳ ನಾರ್ಕೋ ಟೆಸ್ಟ್​ಗಾಗಿ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ. ಹಾಗೆ ಇದಕ್ಕೆ ಪೂರಕವಾಗಿ ಪ್ರತ್ಯೇಕ ಪೂರಕ ಚಾರ್ಜ್ ಶೀಟ್ ಗೆ ತಯಾರಿ ನಡೆಸುತ್ತಿದೆ. ಆದರೆ, ನಾರ್ಕೋ ಪರೀಕ್ಷೆಗೆ ನ್ಯಾಯಾಲಯದ ಅನುಮತಿ ಇನ್ನಷ್ಟೇ ಸಿಗಬೇಕಿದೆ. ಇದಕ್ಕಾಗಿ ಇಂದು ವಿಚಾರಣೆ ನಡೆಯಲಿದೆ.

ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಡಾ.ವಿ.ಮುರುಗೇಶನ್, ಈ ಪ್ರಕರಣದ ವಿಚಾರಣೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಪೊಲೀಸರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಬಲವಾದ ಸಾಕ್ಷಿ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬಹುದು ಎಂದಿದ್ದಾರೆ. ಹಾಗೆ ನ್ಯಾಯಾಲಯ ಮತ್ತು ಪೊಲೀಸ್ ಪ್ರಧಾನ ಕಚೇರಿಯಿಂದ ಬಂದಿರುವ ಮಾಹಿತಿ ಪ್ರಕಾರ 30 ವಿವಿಧ ರೀತಿಯ ಸಾಕ್ಷ್ಯಗಳು ಮತ್ತು 100ಕ್ಕೂ ಹೆಚ್ಚು ಸಾಕ್ಷ್ಯಗಳ ಆಧಾರದ ಮೇಲೆ 500 ಪುಟಗಳ ಮೊದಲ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ, ವಿಚಾರಣೆಯನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ.

ಹಾಗೆ, ಆರೋಪಿಗಳ ನಾರ್ಕೋ ಪರೀಕ್ಷೆಗೆ ಸಂಬಂಧಿಸಿ, ನ್ಯಾಯಾಲಯದ ಆದೇಶ ಮತ್ತು ಆರೋಪಿಗಳ ಒಪ್ಪಿಗೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯ ಆರೋಪಿಯೊಬ್ಬರು ಇದಕ್ಕಾಗಿ 10 ದಿನ ಕಾಲಾವಕಾಶ ಕೂಡ ಕೇಳಿದ್ದರು. ಆದರೆ ಇವರ ಸಮಯ ಬಹುತೇಕ ಮುಗಿದಿದೆ. ಈಗ ಈ ಪ್ರಕರಣದ ವಿಚಾರಣೆ ಇಂದು ನಡೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ:ಹೆಚ್ಚುತ್ತಿರುವ ಕೋವಿಡ್​ ಭೀತಿ: ರಾಜ್ಯಗಳಲ್ಲಿ ಕೊರೊನಾ ತುರ್ತು ಸಭೆ

ABOUT THE AUTHOR

...view details