ಆಳ್ವಾರ್, ರಾಜಸ್ಥಾನ:ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ 34 ವರ್ಷದ ಭಾರತೀಯ ಮಹಿಳೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನ ಗಡಿ ದಾಟಿದ್ದಾರೆ (Anju in Pakistan). ಪತಿಗೆ ಜೈಪುರಕ್ಕೆ ಹೋಗಿ ಬರುವುದಾಗಿ ಹೇಳಿದ್ದ ಮಹಿಳೆ ಈಗ ದೇಶ್ಯಾದಂತ ಸುದ್ದಿಯಾಗಿದ್ದಾರೆ.
ಪಾಕ್ಗೆ ತೆರಳಿದ ಎರಡು ಮಕ್ಕಳ ತಾಯಿ:ಜಿಲ್ಲೆಯ ಭಿವಾಡಿಯ ಅಂಜು ಎಂಬ ಎರಡು ಮಕ್ಕಳ ತಾಯಿಯೊಬ್ಬರು ತನ್ನ ಸ್ನೇಹಿತನನ್ನು ಭೇಟಿಯಾಗಲು ಟ್ರಾವಲಿಂಗ್ ವೀಸಾದಲ್ಲಿ ಪಾಕಿಸ್ತಾನಕ್ಕೆ ತೆರಳಿರುವುದು ಬೆಳಕಿಗೆ ಬಂದಿದೆ. ಪೊಲೀಸರು ತನಿಖೆಯಲ್ಲಿ ತೊಡಗಿದ್ದು, ಅಂಜು ಸುದ್ದಿ ಮಾಧ್ಯಮಗಳಲ್ಲಿ ನಿರಂತರವಾಗಿ ಟ್ರೆಂಡ್ ಆಗುತ್ತಿದೆ. ಹೀಗಿರುವಾಗ ಅಂಜು ಪಾಕಿಸ್ತಾನದಿಂದ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಅದರಲ್ಲಿ ತನ್ನ ಕುಟುಂಬಸ್ಥರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಅಂಜು ಪಾಕಿಸ್ತಾನಕ್ಕೆ ಯಾವ ಪ್ರಕ್ರಿಯೆಯಲ್ಲಿ ತೆರಳಿದ್ದೇನೆಯೋ.. ಅದೇ ರೀತಿಯಲ್ಲಿ ಭಾರತಕ್ಕೆ ಮರಳುತ್ತೇನೆ ಎಂದು ಹೇಳಿದ್ದಾರೆ.
ಲಾಹೋರ್ನಲ್ಲಿ ಭಾರತದ ಮಹಿಳೆ:ಭಾನುವಾರ ಅಂಜು ತನ್ನ ಸ್ನೇಹಿತನನ್ನು ಭೇಟಿಯಾಗಲು ಗಡಿದಾಟಿ ಹೋಗಿರುವುದು ಅವರ ಕುಟುಂಬ ಸದಸ್ಯರಿಗೆ ಗೊತ್ತಾಗಿದೆ. ಆರಂಭದಲ್ಲಿ ಆಕೆ ಅಲ್ಲಿನ ಪೊಲೀಸರ ವಶದಲ್ಲಿದ್ದರು. ಆದರೆ ಅವರ ಪ್ರಯಾಣದ ದಾಖಲೆಗಳನ್ನು ಜಿಲ್ಲಾ ಪೊಲೀಸರು ಪರಿಶೀಲಿಸಿದ ನಂತರ ಬಿಡುಗಡೆ ಮಾಡಲಾಗಿತ್ತು. ಮಾಧ್ಯಮ ವರದಿಗಳ ನಂತರ ರಾಜಸ್ಥಾನ ಪೊಲೀಸರ ತಂಡವು ಅಂಜು ಅವರ ಬಗ್ಗೆ ವಿಚಾರಿಸಲು ಭಿವಾಡಿಯ ಮನೆಗೆ ತಲುಪಿತ್ತು.
ಪ್ರೇಮಿ ಭೇಟಿಯಾಗಲು ಪಾಕ್ಗೆ ತೆರಳಿದ ಎರಡು ಮಕ್ಕಳ ತಾಯಿ ಅಂಜು ಪತಿ ವಿಚಾರಣೆ: ಭಿವಾಡಿ ನಿವಾಸಿ ಅಂಜು ಪಾಕಿಸ್ತಾನದ ಲಾಹೋರ್ ತಲುಪಿದ್ದಾರೆ. ಅಂಜು ಅವರ ಪತಿ ಅರವಿಂದ್ ಅವರನ್ನು ಭಿವಾಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಖಾನ್‌ಪುರ ಗ್ರಾಮದ ನಿವಾಸಿ ಅರವಿಂದ್ 2005ರಲ್ಲಿ ಉದ್ಯೋಗಕ್ಕಾಗಿ ಭಿವಾಡಿಗೆ ಬಂದಿದ್ದರು. 2007 ರಲ್ಲಿ, ಅವರು ಮಧ್ಯಪ್ರದೇಶದ ಗುನಾ ಜಿಲ್ಲೆಯ ನಿವಾಸಿ ಅಂಜು ಅವರನ್ನು ಭೇಟಿಯಾಗಿದ್ದರು. ಅಂಜು ಕೂಡ ಭಿವಾಡಿಯ ತಪುಕಡಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಅಂಜು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್: ನ್ಯೂಸ್ ಚಾನೆಲ್ವೊಂದರಲ್ಲಿ ಅಂಜು ಸುದ್ದಿ ಬಂದ ತಕ್ಷಣ ಆಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಂಜು ಪಾಕಿಸ್ತಾನದಿಂದ ವಿಡಿಯೋ ಮಾಡಿ ಮನೆಯವರಿಗೆ ಕಳುಹಿಸಿದ್ದಾರೆ. "ಭಾರತೀಯ ಮಾಧ್ಯಮಗಳಿಗೆ ನನ್ನ ಏಕೈಕ ವಿನಂತಿಯೆಂದರೆ ದಯವಿಟ್ಟು ನನ್ನ ಕುಟುಂಬ ಸದಸ್ಯರಿಗೆ ಮತ್ತು ನನ್ನ ಮಕ್ಕಳಿಗೆ ತೊಂದರೆ ಕೊಡಬೇಡಿ. ಅವರನ್ನು ಪ್ರಶ್ನಿಸಬೇಡಿ. ನೀವು ಏನು ತಿಳಿದುಕೊಳ್ಳಲು ಬಯಸುತ್ತೀರೋ ಅದನ್ನು ನೀವು ಯಾವಾಗ ಬೇಕಾದರೂ ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ" ಎಂದು ಅವರು ಹೇಳಿದ್ದಾರೆ. ಅಂಜು ಕೆಲವು ದಿನ ಜೈಪುರಕ್ಕೆ ಹೋಗುವುದಾಗಿ ಪತಿ ಅರವಿಂದ್ಗೆ ಹೇಳಿದ್ದರಂತೆ.
ಪಾಕಿಸ್ತಾನದಲ್ಲಿ ಸಂಪೂರ್ಣ ಸೇಫ್:ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ ಎಂದು ಅಂಜು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಅವರು ಭಾರತಕ್ಕೆ ಬಂದಾಗ ಮಾಧ್ಯಮಗಳು, ಪೊಲೀಸ್ ಆಡಳಿತ ಮತ್ತು ಭದ್ರತಾ ಸಂಸ್ಥೆಗಳು ಎಲ್ಲರಿಗೂ ಉತ್ತರಿಸುತ್ತೇನೆ. ಅವರು ಪಾಕಿಸ್ತಾನದಲ್ಲಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಅಂಜು ಹೇಳಿದ್ದಾರೆ. ಅರವಿಂದ್ ಅವರಿಗೆ 15 ವರ್ಷದ ಮಗಳು ಮತ್ತು 5 ವರ್ಷದ ಮಗ ಇದ್ದಾರೆ. ಅಂಜು ಪಾಕಿಸ್ತಾನಕ್ಕೆ ಹೋಗಲು ಹೊಸ ಸಿಮ್ ಖರೀದಿಸಿದ್ದರು. ಅದರ ನಂಬರ್ ಕೂಡ ಗಂಡನಿಗೆ ಕೊಟ್ಟಿರಲಿಲ್ಲ. ಈ ಮಾಹಿತಿಯ ನಂತರ, ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಸಂಸ್ಥೆ ಸ್ಥಳಕ್ಕೆ ಆಗಮಿಸಿ ಅರವಿಂದ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಓದಿ:ಸೋಶಿಯಲ್ ಮೀಡಿಯಾ ಗೆಳೆಯನ ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ ರಾಜಸ್ಥಾನದ ವಿವಾಹಿತ ಮಹಿಳೆ