ಕರ್ನಾಟಕ

karnataka

ETV Bharat / bharat

"ಭ್ರಷ್ಟಾಚಾರ ಆರೋಪದ ತನಿಖೆ ನಡೆಸಿ": ಮಹಾ ಸಿಎಂಗೆ ಪತ್ರ ಬರೆದ ಅನಿಲ್ ದೇಶ್​ಮುಖ್

ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಮಾಹಿತಿ ನೀಡಿದ್ದಾರೆ.

Anil Desmukh
ಅನಿಲ್ ದೇಶ್​ಮುಖ್

By

Published : Mar 25, 2021, 9:08 AM IST

ಮುಂಬೈ: ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ತಮ್ಮ ಮೇಲೆ ಹೊರಿಸಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಮಾಹಿತಿ ನೀಡಿದ್ದಾರೆ.

ಪತ್ರ ಬರೆದ ಅನಿಲ್ ದೇಶ್​ಮುಖ್

ತಮ್ಮ ಟ್ವಿಟರ್​ ಖಾತೆಯಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ. "ಸತ್ಯವನ್ನು ಹೊರತರುವಂತೆ (ಮುಂಬೈನ ಮಾಜಿ ಪೊಲೀಸ್ ಆಯುಕ್ತ) ಪರಮ್ ಬಿರ್ ಸಿಂಗ್ ಅವರು ನನ್ನ ಮೇಲೆ ಮಾಡಿರುವ ಆರೋಪಗಳ ಬಗ್ಗೆ ವಿಚಾರಿಸಲು ನಾನು ಮುಖ್ಯಮಂತ್ರಿಯನ್ನು ಮನವಿ ಮಾಡಿದ್ದೇನೆ" ಎಂದು ಅವರು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ವಾಜೆ ಮೇಲೆ ಅನಿಲ್​ ದೇಶಮುಖ್​ ಒತ್ತಡ: ಪರಮ್​ ಬೀರ್​ ಸಿಂಗ್

"ಮುಖ್ಯಮಂತ್ರಿ ಈ ವಿಷಯವನ್ನು ವಿಚಾರಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ. ಸತ್ಯಮೇವ್ ಜಯತೆ" ಎಂದು ಅವರು ಹೇಳಿದರು.

ಪ್ರತಿ ತಿಂಗಳು 100 ಕೋಟಿ ರೂ. ಹಣ ಸಂಗ್ರಹ ಮಾಡುವಂತೆ ಮುಂಬೈ ಪೊಲೀಸ್​​ ಅಧಿಕಾರಿ ಸಚಿನ್​ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​​ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್​ ಆಯುಕ್ತ​ ಪರಮ್​​ ಬೀರ್​​ ಸಿಂಗ್​ ಈ ಹಿಂದೆ ಆರೋಪ ಮಾಡಿದ್ದರು.

ABOUT THE AUTHOR

...view details