ಕರ್ನಾಟಕ

karnataka

ETV Bharat / bharat

ಅಂಕಿತಾ ಭಂಡಾರಿ ಕೊಲೆ ಪ್ರಕರಣ: ರೊಚ್ಚಿಗೆದ್ದ ಜನರಿಂದ ಬಿಜೆಪಿ ನಾಯಕನ ಪುತ್ರನ ಫ್ಯಾಕ್ಟರಿಗೆ ಬೆಂಕಿ - ಕಾರ್ಖಾನೆಯಲ್ಲಿ ಅನೇಕ ಅನೈತಿಕ ಕೃತ್ಯ

ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ರೊಚ್ಚಿಗೆದ್ದ ಜನರ ಆಕ್ರೋಶ ಶಮನವಾಗುತ್ತಿಲ್ಲ. ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ವಿರುದ್ಧವೂ ಉದ್ರಿಕ್ತರ ಪ್ರತಿಭಟನೆ ಜೋರಾಗಿದೆ. ಈ ವೇಳೆ ಇಂದು ಗ್ರಾಮಸ್ಥರು ಪುಲ್ಕಿತ್ ಆರ್ಯ ಫ್ಯಾಕ್ಟರಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ankita bhandari murder  uttarakhand resort murder  Bjp leader son uttarakhand resort case  Ankita Bhandari murder Pulkit Arya  Angry villagers set fire factory  ಅಂಕಿತಾ ಭಂಡಾರಿ ಕೊಲೆ ಪ್ರಕರಣ  ಜನರಿಂದ ಬಿಜಪಿ ನಾಯಕನ ಪುತ್ರನ ಫ್ಯಾಕ್ಟರಿಗೆ ಬೆಂಕಿ  ಅಂಕಿತಾ ಭಂಡಾರಿ ಹತ್ಯೆ ಪ್ರಕರಣ  ಅಂಕಿತಾ ಭಂಡಾರಿ ಹಂತಕರ ವಿರುದ್ಧ ಜನರ ಆಕ್ರೋಶ  ಕಾರ್ಖಾನೆಯಲ್ಲಿ ಅನೇಕ ಅನೈತಿಕ ಕೃತ್ಯ  ಪುಲ್ಕಿತ್ ಆರ್ಯ ಮತ್ತು ಅಂಕಿತಾ ಭಂಡಾರಿ ನಡುವೆ ಜಗಳ
ankita bhandari murder uttarakhand resort murder Bjp leader son uttarakhand resort case Ankita Bhandari murder Pulkit Arya Angry villagers set fire factory ಅಂಕಿತಾ ಭಂಡಾರಿ ಕೊಲೆ ಪ್ರಕರಣ ಜನರಿಂದ ಬಿಜಪಿ ನಾಯಕನ ಪುತ್ರನ ಫ್ಯಾಕ್ಟರಿಗೆ ಬೆಂಕಿ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ಅಂಕಿತಾ ಭಂಡಾರಿ ಹಂತಕರ ವಿರುದ್ಧ ಜನರ ಆಕ್ರೋಶ ಕಾರ್ಖಾನೆಯಲ್ಲಿ ಅನೇಕ ಅನೈತಿಕ ಕೃತ್ಯ ಪುಲ್ಕಿತ್ ಆರ್ಯ ಮತ್ತು ಅಂಕಿತಾ ಭಂಡಾರಿ ನಡುವೆ ಜಗಳ

By

Published : Sep 24, 2022, 2:00 PM IST

Updated : Sep 24, 2022, 4:33 PM IST

ಋಷಿಕೇಶ(ಉತ್ತರಾಖಂಡ್)​: 19 ವರ್ಷದ ಅಂಕಿತಾ ಭಂಡಾರಿ ಹತ್ಯೆ ಇಡೀ ಉತ್ತರಾಖಂಡವನ್ನೇ ಹೊತ್ತಿ ಉರಿಯುವಂತೆ ಮಾಡಿದೆ. ಅಂಕಿತಾ ಭಂಡಾರಿ ಹಂತಕರ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ. ನಿನ್ನೆ, ಅಂಕಿತಾ ಭಂಡಾರಿ ಕೊಲೆ ಆರೋಪಿ ಮತ್ತು ಬಿಜೆಪಿ ಮುಖಂಡ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಅವರ ರೆಸಾರ್ಟ್ ವನಂತ್ರವನ್ನು ಗ್ರಾಮಸ್ಥರು ಧ್ವಂಸಗೊಳಿಸಿದ್ದರು. ಪುಲ್ಕಿತ್ ಆರ್ಯ ಅವರ ಕಾರ್ಖಾನೆಯನ್ನು ನಿರ್ಮಿಸಿದ ಹಲವು ವರ್ಷಗಳ ನಂತರ ವನಂತ್ರಾ ರೆಸಾರ್ಟ್ ಅನ್ನು ನಿರ್ಮಿಸಲಾಗಿತ್ತು. ಈ ರೆಸಾರ್ಟ್ ಪುಲ್ಕಿತ್ ಅವರ ದುರಾಚಾರದ ಅಡ್ಡೆಯಾಗಿತ್ತು. ಕಾರ್ಖಾನೆಯಲ್ಲಿ ಅನೇಕ ಅನೈತಿಕ ಕೃತ್ಯಗಳು ನಡೆಯುತ್ತಿದ್ದವು ಎಂಬ ಆರೋಪಗಳು ಕೇಳಿ ಬರುತ್ತಿವೆ.

ಭುಗಿಲೆದ್ದ ಆಕ್ರೋಶ.. ಇಂದಿಗೂ ಜನರ ಕೋಪ ತಣ್ಣಗಾಗಿಲ್ಲ. ಇಂದು ರೆಸಾರ್ಟ್ ಹಿಂಭಾಗದಲ್ಲಿ ನಿರ್ಮಿಸಲಾಗಿದ್ದ ಪುಲ್ಕಿತ್ ಆರ್ಯ ಅವರ ಕಾರ್ಖಾನೆಗೆ ಅಪರಿಚಿತರು ಬೆಂಕಿ ಹಚ್ಚಿದ್ದಾರೆ. ನಿನ್ನೆ ಪೊಲೀಸರು ಆರೋಪಿಗಳನ್ನು ಬಂಧಿಸಿದಾಗ ಆ ಸಮಯದಲ್ಲೂ ಜನರು ಆರೋಪಿಗಳನ್ನು ಥಳಿಸಿದ್ದರು. ಪೊಲೀಸರು ಕಷ್ಟಪಟ್ಟು ಮೂವರು ಆರೋಪಿಗಳನ್ನು ರಕ್ಷಿಸಿದ್ದರು.

ರೊಚ್ಚಿಗೆದ್ದ ಜನರಿಂದ ಬಿಜೆಪಿ ನಾಯಕನ ಪುತ್ರನ ಫ್ಯಾಕ್ಟರಿಗೆ ಬೆಂಕಿ

ಕೊಲೆ ಆರೋಪ.. ಕಳೆದ ಸೆಪ್ಟೆಂಬರ್ 18 ರಿಂದ ಕಾಣೆಯಾಗಿದ್ದ ಅಂಕಿತಾ ಭಂಡಾರಿ ಅವರ ಶವ ಇಂದು ಸೆಪ್ಟೆಂಬರ್ 24 ರಂದು ಋಷಿಕೇಶ ಬಳಿಯ ಚಿಲಾ ಶಕ್ತಿ ಕಾಲುವೆಯಲ್ಲಿ ಪತ್ತೆಯಾಗಿದೆ. ಐದು ದಿನಗಳ ಹಿಂದೆ ಅಂಕಿತಾ ಅವರನ್ನು ವನಂತ್ರಾ ರೆಸಾರ್ಟ್ ಮಾಲೀಕ ಮತ್ತು ಬಿಜೆಪಿಯ ಮಾಜಿ ಸಚಿವರ ಪುತ್ರ ಪುಲ್ಕಿತ್ ಆರ್ಯ ಅವರ ರೆಸಾರ್ಟ್ ಮ್ಯಾನೇಜರ್ ಮತ್ತು ಇತರ ನೌಕರರು ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 19 ವರ್ಷದ ಅಂಕಿತಾ ಭಂಡಾರಿ ವನಂತ್ರಾ ರೆಸಾರ್ಟ್‌ನಲ್ಲಿ ರಿಷೆಪ್ಸನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪುಲ್ಕಿತ್ ಆರ್ಯ ಮತ್ತು ಅವರ ಮ್ಯಾನೇಜರ್ ಅಂಕಿತಾ ಭಂಡಾರಿ ಮೇಲೆ ವನಂತ್ರಾ ರೆಸಾರ್ಟ್‌ನಲ್ಲಿ ತಂಗಿರುವ ಗ್ರಾಹಕರೊಂದಿಗೆ ತಪ್ಪು ಕೆಲಸಗಳನ್ನು ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ. ಇದಕ್ಕೆ ಅಂಕಿತಾ ಭಂಡಾರಿ ನಿರಾಕರಿಸಿದ್ದಾರೆ. ಈ ವಿಚಾರವಾಗಿ ಪುಲ್ಕಿತ್ ಆರ್ಯ ಮತ್ತು ಅಂಕಿತಾ ಭಂಡಾರಿ ನಡುವೆ ಜಗಳವೂ ನಡೆದಿದೆ ಎನ್ನಲಾಗಿದೆ.

ಅಂಕಿತಾ ಭಂಡಾರಿ ಅವರ ಕಾರಿನೊಂದಿಗೆ ಋಷಿಕೇಶಕ್ಕೆ ಹೋಗಿದ್ದೆವು ಎಂದು ಆರೋಪಿಗಳು ಇಕ್ಬಾಲ್-ಎ-ಜುರ್ಮ್ ಪೊಲೀಸರಿಗೆ ತಿಳಿಸಿದ್ದಾರೆ. ಮಾರ್ಗಮಧ್ಯೆ ಚಿಲ ಕಾಲುವೆ ಬಳಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಪುಲ್ಕಿತ್ ಆರ್ಯ ಹಾಗೂ ಅಂಕಿತಾ ಭಂಡಾರಿ ನಡುವೆ ಮತ್ತೆ ಜಗಳವಾಗಿದೆ. ಅಂಕಿತಾ ಪುಲ್ಕಿತ್ ಆರ್ಯ ಅವರ ಫೋನ್ ಅನ್ನು ಕಾಲುವೆಗೆ ಎಸೆದರು, ನಂತರ ಪುಲ್ಕಿತ್ ಆರ್ಯ ಕೋಪಗೊಂಡು ಅಂಕಿತಾ ಭಂಡಾರಿಯನ್ನು ಕಾಲುವೆಗೆ ತಳ್ಳಿದರು ಎಂದು ಆರೋಪಿ ತಿಳಿಸಿದ್ದಾರೆ.

ಇದಾದ ಬಳಿಕ ಮೂವರು ಆರೋಪಿಗಳು ಮತ್ತೆ ರೆಸಾರ್ಟ್‌ಗೆ ಬಂದಿದ್ದರು. ಈ ವಿಷಯವನ್ನು ಮರೆಮಾಚಲು ಪುಲ್ಕಿತ್ ಆರ್ಯ ಸಂಚು ರೂಪಿಸಿದ್ದರು. ಸಂಚಿನ ಅಡಿಯಲ್ಲಿ, ಪುಲ್ಕಿತ್ ಆರ್ಯ ಅಂಕಿತಾ ಭಂಡಾರಿ ಅವರ ಕಾಣೆಯಾದ ವರದಿಯನ್ನು ಸಲ್ಲಿಸಿದರು. ಆದರೆ ಅಂಕಿತಾ ಮೂರು ದಿನಗಳ ನಂತರವೂ ಪತ್ತೆಯಾಗದಿದ್ದಾಗ, ಕುಟುಂಬವು ಪೊಲೀಸ್​ ಆಡಳಿತದ ಮೇಲೆ ಒತ್ತಡ ಹೇರಿತು. ಇದಾದ ನಂತರ ಈ ಪ್ರಕರಣವನ್ನು ಪೊಲೀಸರಿಗೆ ವರ್ಗಾಯಿಸಲಾಯಿತು. ಪೊಲೀಸರು ಪ್ರಕರಣ ಬಯಲಿಗೆಳೆದು ಮೂವರನ್ನೂ ಬಂಧಿಸಿದ್ದಾರೆ.

ಓದಿ:ರೆಸಾರ್ಟ್ ರಿಷೆಪ್ಸನಿಸ್ಟ್​ ಹತ್ಯೆ : ಬಿಜೆಪಿ ನಾಯಕನ ಮಗನ ರೆಸಾರ್ಟ್​​ ನೆಲಸಮ

Last Updated : Sep 24, 2022, 4:33 PM IST

ABOUT THE AUTHOR

...view details