ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ರಾಜ್ಯದ ಬಸ್​, ಕನ್ನಡಿಗರ ವಾಹನಗಳ ಮೇಲೆ ಶಿವಸೇನೆ ಕಲ್ಲು ತೂರಾಟ - ವಿಡಿಯೋ

ಶಿವಾಜಿ ಪ್ರತಿಮೆಗೆ ಅವಮಾನ ಖಂಡಿಸಿ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಕರ್ನಾಟಕದ ಬಸ್, ಕನ್ನಡಿಗರ ವಾಹನಗಳು ಹಾಗೂ ಅಂಗಡಿಗಳ ಮೇಲೆ ಶಿವಸೇನೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ.

Angry Shivsena workers pelted stones, stones pelted on Karnataka state buses, Insult to Shivaji Statue, ಶಿವಾಜಿ ಪ್ರತಿಮೆಗೆ ಅವಮಾನ, ಕರ್ನಾಟಕದ ಬಸ್​ಗಳ ಮೇಲೆ ಶಿವಸೇನೆ ಕಲ್ಲು ತೂರಾಟ, ಉದ್ರಿಕ್ತ ಶಿವಸೇನೆ ಕಾರ್ಯಕರ್ತರಿಂದ ಕಲ್ಲು ತೂರಾಟ,
ರಾಜ್ಯದ ಬಸ್​, ಉದ್ಯಮಿಗಳ ಮೇಲೆ ಶಿವಸೇನೆ ಕಲ್ಲು ತೂರಾಟ

By

Published : Dec 18, 2021, 1:08 PM IST

Updated : Dec 18, 2021, 2:08 PM IST

ಸಾಂಗ್ಲಿ(ಮಹಾರಾಷ್ಟ್ರ): ನಗರದಲ್ಲಿ ಕನ್ನಡ ಉದ್ಯಮಿಗಳ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಆಕ್ರೋಶಗೊಂಡ ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಅಂಗಡಿಗಳನ್ನು ಸಹ ಧ್ವಂಸಗೊಳಿಸಿದ್ದಾರೆ.

ರಾಜ್ಯದ ಬಸ್​, ಉದ್ಯಮಿಗಳ ಮೇಲೆ ಶಿವಸೇನೆ ಕಲ್ಲು ತೂರಾಟ

ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ದುಷ್ಕರ್ಮಿಗಳು ಅವಮಾನ ಮಾಡಿರುವ ಘಟನೆ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀರಜ್​ನಲ್ಲಿ ಸಿಟ್ಟಿಗೆದ್ದ ಶಿವಸೇನಾ ಸೈನಿಕರು ಬೀದಿಗಿಳಿದು ಕರ್ನಾಟಕ ರಾಜ್ಯದ ಬಸ್ ಹಾಗೂ ಖಾಸಗಿ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ.

ಕನ್ನಡಿಗರ ವಾಹನಗಳ ಮೇಲೆ ಶಿವಸೇನೆ ಕಲ್ಲು ತೂರಾಟ

ಕರ್ನಾಟಕ ರಾಜ್ಯದ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅದೇ ಸಮಯದಲ್ಲಿ, ಶಿವಸೇನಾ ಕಾರ್ಯಕರ್ತರು ಕೆಲವು ಖಾಸಗಿ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನಗರದಲ್ಲಿ ಕನ್ನಡ ವ್ಯಾಪಾರಸ್ಥರ ಅಂಗಡಿಗಳ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿ ಇಲ್ಲಿನ ಕನ್ನಡ ವ್ಯಾಪಾರಿಗಳ ಜಾಹೀರಾತು ಫಲಕಗಳನ್ನು ಒಡೆದು ಹಾಕುತ್ತಿದ್ದಾರೆ.

ಕನ್ನಡಿಗರ ವಾಹನಗಳ ಮೇಲೆ ಶಿವಸೇನೆ ಕಲ್ಲು ತೂರಾಟ

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕನ್ನಡಿಗರ ಮೇಲೆ ಎಮ್​ಇಎಸ್ ಉದ್ಧಟತನ ಪ್ರದರ್ಶಿಸಿದೆ. ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಅಟ್ಟಹಾಸ ಮೆರೆಯುತ್ತಿದೆ. ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಇರುವ ಕನ್ನಡ ಬೋರ್ಡ್​ಗಳಿಗೆ ಮಸಿ ಬಳಿದಿದ್ದಾರೆ. ಹಿಂಸಾಚಾರಕ್ಕೆ ಇಳಿದ ಎಂಇಎಸ್​ ಮತ್ತು ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಗಡಿಭಾಗ ಉದ್ಧಟತನ ಪ್ರದರ್ಶಿಸಿದ್ದಾರೆ. ಸಾಂಗ್ಲಿಯಲ್ಲಿ ಸುಮಾರು ಶೇ.50ಕ್ಕೂ ಹೆಚ್ಚು ಕನ್ನಡಿಗರು ವಾಸಿಸುತ್ತಿದ್ದಾರೆ. ಕರ್ನಾಟಕದ ಪ್ರತಿಷ್ಠಿತ ವೈದ್ಯರ ಆಸ್ಪತ್ರೆಗಳ ಕನ್ನಡ ಫಲಕಗಳಿಗೆ ಮಸಿ ಬಳಿಯುತ್ತಾ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕುತ್ತಿದ್ದಾರೆ.

Last Updated : Dec 18, 2021, 2:08 PM IST

ABOUT THE AUTHOR

...view details