ಬಸ್ತಿ(ಉತ್ತರಪ್ರದೇಶ): ಬಸ್ತಿಯ ಪರಸ್ರಾಂಪುರ ಪಟ್ಟಣದ ಆಟೋ ಬಿಡಿಭಾಗಗಳ ಗೋದಾಮಿನಲ್ಲಿ ಸೋಮವಾರ ಯುವಕನೊಬ್ಬ ತನ್ನ ತಂದೆಯ ಪಿಸ್ತೂಲ್ನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುನೀಲ್ ಮೌರ್ಯ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವವ ಎಂದು ಡಿಎಸ್ಪಿ ಶೇಷಮಣಿ ಉಪಾಧ್ಯಾಯ ತಿಳಿಸಿದ್ದಾರೆ.
ಯುವಕ ಆತ್ಮಹತ್ಯೆಗೂ ಮುನ್ನ ಫೇಸ್ಬುಕ್ ಖಾತೆಯಲ್ಲಿ ತನ್ನ ಗೆಳತಿಯೊಂದಿಗೆ ಹಲವಾರು ಫೋಟೋಗಳ ಜೊತೆಗೆ ತನ್ನ ನೋವು ಹಂಚಿಕೊಂಡ ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ಅದರಲ್ಲಿ ಸುನೀಲ್ ಆತ್ಮಹತ್ಯೆಗೆ ತನ್ನ ಗೆಳತಿ ಸೇರಿದಂತೆ ಇಬ್ಬರೇ ಕಾರಣ ಎಂದು ಆರೋಪಿಸಿದ್ದಾರೆ.
ಯುವಕ 10 ವರ್ಷಗಳಿಂದ ಅನ್ಯಧರ್ಮೀಯ ಯುವತಿ ಪ್ರೀತಿಸುತ್ತಿದ್ದು, ಯುವತಿ ಈಗ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಯುವಕ ವಿಡಿಯೋದಲ್ಲಿ ಹೇಳಿದ್ದಾನೆ. ವಿಡಿಯೋದಲ್ಲಿ ತನ್ನ ಗೆಳತಿ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾನೆ.
ವಿಡಿಯೋದಲ್ಲಿ ಸುನೀಲ್ ತನ್ನ ಗೆಳತಿಯ ಹೆಸರು ನೂರ್ಜಹಾನ್ ಬೇಗಂ (ಹೆಸರು ಬದಲಿಸಲಾಗಿದೆ) ಎಂದು ಹೇಳಿಕೊಂಡಿದ್ದಾರೆ. ಇವರಿಬ್ಬರು ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರೂ ಲಿವಿಂಗ್ ಇನ್ ರಿಲೇಶನ್ಶಿಪ್ನಲ್ಲಿದ್ದರು. ನೂರ್ಜಹಾನ್ ಬೇಗಂ ಅವರ ಕನಸುಗಳನ್ನು ಪ್ರೇರೇಪಿಸಿರುವ ಸುನೀಲ್ ಕಾನ್ಪುರ, ಲಖನೌ ಮತ್ತು ದೆಹಲಿಯಲ್ಲಿ ಒಟ್ಟಿಗೆ ಇದ್ದುಕೊಂಡು ಆಕೆಗೆ ಶಿಕ್ಷಣ ಕೊಡಿಸಿದ್ದಾನೆ. ಸುನೀಲ್ ಅವರ ಈ ನಿರ್ಧಾರದಿಂದ ಸುನಿಲ್ ಕುಟುಂಬಸ್ಥರು ಕೂಡ ಸಂತಸ ಪಟ್ಟಿದ್ದರು.