ಪ್ರಯಾಗರಾಜ್: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಗೌತಮ್ ಚೌಧರಿ ಅವರು ರೈಲು ಪ್ರಯಾಣದ ಸಮಯದಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡದೇ ಇರುವುದರಿಂದ ರೈಲ್ವೆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಈ ಸಂಬಂಧ ರೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಇದರೊಂದಿಗೆ ತಪ್ಪಿತಸ್ಥ ರೈಲ್ವೆ ಸಿಬ್ಬಂದಿ ಹಾಗೂ ಅಡೆತಡೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡುವಂತೆಯೂ ಸೂಚನೆ ನೀಡಲಾಗಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಗೌತಮ್ ಚೌಧರಿ ಅವರು ತಮ್ಮ ಪತ್ನಿಯೊಂದಿಗೆ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಯಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ರೈಲು ಮೂರು ಗಂಟೆ ತಡವಾಯಿತು. ರೈಲು ತಡವಾಗಿ ಬಂದ ನಂತರ ಜಡ್ಜ್ ಪದೇ ಪದೆ ಅನಾನುಕೂಲತೆಗಳನ್ನು ಎದುರಿಸಬೇಕಾಯಿತು.
ಹೀಗೆ ಉಂಟಾದ ಅಡತಡೆಯಿಂದ ಅವರು ಈ ಬಗ್ಗೆ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ದೂರವಾಣಿ ಕರೆ ಮಾಡಿ, ರೈಲ್ವೆಯಿಂದ ವಿವರಣೆ ಪಡೆಯುವಂತೆ ಸೂಚಿಸಿದರು. ಇದಾದ ನಂತರ, ಹೈಕೋರ್ಟ್‌ನ ರಿಜಿಸ್ಟ್ರಾರ್ ಪ್ರೋಟೋಕಾಲ್ ಪರವಾಗಿ, ರೈಲ್ವೆಯ ಜಿಎಂ ಮತ್ತು ಇತರ ಅಧಿಕಾರಿಗಳಿಗೆ ನೋಟಿಸ್ ಕಳುಹಿಸುವ ಮೂಲಕ, ಸಂಬಂಧಿತ ನೌಕರರಿಂದ ಉತ್ತರವನ್ನು ಕೋರಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಉತ್ತರವನ್ನು ಹೈಕೋರ್ಟ್‌ಗೆ ತಿಳಿಸಲು ಸೂಚನೆಗಳನ್ನು ನೀಡಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಪ್ರೋಟೋಕಾಲ್ ಅಧಿಕಾರಿ ಆಶಿಶ್ ಶ್ರೀವಾಸ್ತವ ಪರವಾಗಿ, ಉತ್ತರ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್‌ಗೆ ನ್ಯಾಯಮೂರ್ತಿಗಳ ದೂರಿನ ಬಗ್ಗೆ ತಿಳಿಸಲು ನೋಟಿಸ್ ಕಳುಹಿಸಲಾಗಿದೆ. ಈ ನೋಟಿಸ್ಗೆ ಉತ್ತರಿಸುವಂತೆಯೂ ಸೂಚಿಸಲಾಗಿದೆ. ಹೈಕೋರ್ಟ್‌ನ ರಿಜಿಸ್ಟ್ರಾರ್ ಕಳುಹಿಸಿರುವ ಪತ್ರದಲ್ಲಿ ಜುಲೈ 8 ರಂದು ನ್ಯಾಯಮೂರ್ತಿಗಳು ತಮ್ಮ ಪತ್ನಿಯೊಂದಿಗೆ ದೆಹಲಿಯಿಂದ ಪ್ರಯಾಗರಾಜ್ ಪುರುಷೋತ್ತಮ್ ಎಕ್ಸ್‌ಪ್ರೆಸ್‌ನ ಎಸಿ ಫಸ್ಟ್ ಕೋಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ಪತ್ರದಲ್ಲಿ ತಿಳಿಸಲಾಗಿದೆ. ರೈಲು 3 ಗಂಟೆಗಳ ಕಾಲ ವಿಳಂಬವಾದ ನಂತರ, ಉಪಹಾರದ ವ್ಯವಸ್ಥೆಗಾಗಿ ನ್ಯಾಯಮೂರ್ತಿಗಳನ್ನು ಸಂಪರ್ಕಿಸಲಾಯಿತು. ಆದರೆ, ಹಲವಾರು ಬಾರಿ ಸಂಪರ್ಕಿಸಿದರೂ ಜಸ್ಟೀಸ್ಗೆ ಉಪಹಾರ ಲಭ್ಯವಾಗಿರಲಿಲ್ಲ.