ಭೋಪಾಲ್(ಮಧ್ಯಪ್ರದೇಶ): ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ತೊಂದರೆಯಿಂದ ನರಳುತ್ತಿರುವ ರೋಗಿಗಳಿಗೆ ಮಧ್ಯಪ್ರದೇಶದ ಸಾಗರ್ ಎಂಬ ಊರಿನಲ್ಲಿ 1992 ರಲ್ಲಿ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸ್ನೇಹಿತರು ವೆಂಟಿಲೇಟರ್ ಹಾಗೂ ಆಮ್ಲಜನಕ ಸಿಲಿಂಡರ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ತಮ್ಮೂರಿನ ಸೋಂಕಿತರ ಸಂಕಷ್ಟಕ್ಕೆ ಮಿಡಿದ ಗುಂಪು: ವೆಂಟಿಲೇಟರ್ ಪೂರೈಸಿ ಮಾನವೀಯತೆ ಮೆರೆದ ಸ್ನೇಹಿತರು - सागर में ऑक्सीजन की कमी
ಕೊರೊನಾ ಸೋಂಕಿನಿಂದ ಉಸಿರಾಟದ ತೊಂದರೆ ಅನುಭವಿಸುತ್ತಿರುವ ತಮ್ಮ ಊರಿನ ಸೋಂಕಿತರ ನೆರವಿಗೆ ಮಧ್ಯಪ್ರದೇಶದಲ್ಲಿ ತಂಡವೊಂದು ಧಾವಿಸಿ ಮಾನವೀಯತೆ, ಸಾಮಾಜಿಕ ಪ್ರಜ್ಞೆ ಮೆರದು ಗಮನ ಸೆಳೆದಿದೆ.
ಕೊರೊನಾ ನಗರದಲ್ಲಿ ಹಾನಿಯನ್ನುಂಟು ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ಉಂಟಾಗಿದೆ ಎಂದು ತಿಳಿದ ಸ್ನೇಹಿತರ ಗುಂಪು ತಮ್ಮ ಹೂಟ್ಟಿರಿನ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ದೇಶದ ವಿವಿಧ ನಗರಗಳಲ್ಲಿ ವಾಸಿಸುವ ಎಲ್ಲ ಸ್ನೇಹಿತರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸಲಾಗಿದೆ. ಈ ಗುಂಪಿನಲ್ಲಿ 85 ಸದಸ್ಯರಿದ್ದಾರೆ. ವಿಶೇಷವೆಂದರೆ ಈ ಸ್ನೇಹಿತರು ತಮ್ಮ ಗುಂಪನ್ನು ವಿಶಿಷ್ಟ ಬುಂದೇಲ್‌ಖಂಡ ಶೈಲಿಯಲ್ಲಿ 'ಕೋ ಕಾ ಕೆ ರಾವ್' ಎಂದು ಕರೆದುಕೊಂಡಿದ್ದಾರೆ.
ಗುಂಪಿನ ಸದಸ್ಯರು ಈ ಅಭಿಯಾನಕ್ಕೆ ಸೇರಲು ನಗರದ ಸಾಮಾಜಿಕ ಕಾರ್ಯಕರ್ತರು ನಾಗರಿಕರು ಮತ್ತು ಸಾಮಾಜಿಕ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಇಲ್ಲಿಯವರೆಗೆ, ಅವರು ತಮ್ಮ ನಡುವೆ 20 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ ಮತ್ತು 20 ಆಮ್ಲಜನಕದ ಯಂತ್ರಗಳನ್ನು ಖರೀದಿಸಿದ್ದಾರೆ. 50 ಯಂತ್ರಗಳನ್ನು ಖರೀದಿಸುವ ಗುರಿಯನ್ನು ಹೊಂದಿದ್ದಾರೆ. ಪ್ರಸ್ತುತ, ಕೊರೊನಾದಂತಹ ಸಾಂಕ್ರಾಮಿಕವು ಉತ್ತುಂಗದಲಿದ್ದು, ಭವಿಷ್ಯದಲ್ಲಿ ಹೆಚ್ಚಿನ ಆಮ್ಲಜನಕದ ಅಗತ್ಯವಿದೆ. ಜನರು ಸಹ ನಮ್ಮೊಂದಿಗೆ ಸೇರಿಕೊಂಡು ಸೋಂಕಿತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.