ಹೈದರಾಬಾದ್: ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣು ಒಬ್ಬಳು ಇರುತ್ತಾಳೆ ಎಂಬ ಮಾತಿಗೆ ತತ್ವಿರುದ್ಧದ ಘಟನೆಗಳು ನಮ್ಮ ಮುಂದೆ ನಡೆಯುತ್ತಿರುತ್ತದೆ. ಅದೇ ರೀತಿಯ ಘಟನೆ ಇದೀಗ ಆಂಧ್ರದಲ್ಲಿ ನಡೆದಿದೆ. ಓದಿನ ಹಂಬಲದ ಹಸಿವನ್ನು ಹೊಂದಿದ್ದ ಹೆಂಡತಿ ಕನಸಿಗೆ ಆಟೋ ಡ್ರೈವರ್ ನಿರೇರದು ಪೋಷಿಸಿದ್ದಾರೆ. ಇದರ ಫಲವಾಗಿ ಇಂದು ಆಕೆ ಎಎನ್ಯುನಲ್ಲಿ ಪಿಎಚ್ಡಿ ಪೂರ್ಣಗೊಳಿಸುವಂತಾಗಿದೆ. ಇವರ ಹೆಸರು ಈಪುರಿ ಶೀಲ. ತಮ್ಮ ಈ ಸಾಧನೆ ಮತ್ತು ಕುಟುಂಬದ ಪ್ರೋತ್ಸಾಹ ಕುರಿತು ಅವರು ಈಟಿವಿ ಭಾರತ್ ಜೊತೆಗೆ ಮಾತನಾಡಿದ್ದಾರೆ.
ಏನಿದು ಘಟನೆ: ಗುಂಟೂರು ಜಿಲ್ಲೆಯ ತೆನಲಿ ಮಂಡಲ್ನ ಪೆದರವೂರ್ ಗ್ರಾಮದ ಈಪುರಿ ಶೀಲ 2003ರಲ್ಲಿ ಪದವಿ ಓದುತ್ತಿರುವಾಗಲೇ ಮದುವೆಯಾದರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಕರುಣಾಕರ್ ಎಂಬುವವರನ್ನು ವರಿಸಿದ ಅವರು ಓದನ್ನು ಅಲ್ಲಿಗೆ ಕೈ ಬಿಡಲಿಲ್ಲ. ಓದಿನ ಬಗ್ಗೆ ತನಗಿದ್ದ ಆಸಕ್ತಿಯನ್ನು ಗಮನಿಸಿದ ಕುಟುಂಬ ಸದಸ್ಯರು ಇಲ್ಲಿಯವರೆಗೆ ನನಗೆ ಪ್ರೋತ್ಸಾಹಿಸಿದರು ಎನ್ನುತ್ತಾರೆ ಆಕೆ. ಇನ್ನು ಓದಿನ ಆಸಕ್ತಿ ಜೊತೆ ಕುಟುಂಬ ಹೊಣೆಗಾರಿಕೆಯನ್ನು ಈಕೆ ಸಮರ್ಧವಾಗಿ ನಿರ್ವಹಿಸಿದ್ದಾರೆ. ಇವರಿಗೆ ಇಂಜಿನಿಯರಿಂಗ್ ಓದುತ್ತಿರುವ ಮಗ ಇದ್ದು, ಇಂಟರ್ನ್ ಮಾಡುತ್ತಿರುವ ಮಗಳಿದ್ದಾಳೆ. ಇವರ ಜೊತೆಗೆ ನನ್ನ ಓದು ಸಾಗುತ್ತಿದೆ ಎನ್ನುತ್ತಾರೆ ಶೀಲ.