ಹೈದರಾದ್/ಅರಿಜೋನ್: ಅಮೆರಿಕ ಜನರು ಶೀತ ಚಂಡಮಾರುತಕ್ಕೆ ತತ್ತರಿಸಿದ್ದಾರೆ. ಶೀತ ಚಂಡಮಾರುತದಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು, ಆಂಧ್ರ ಪ್ರದೇಶದ ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅರಿಜೋನ್ನಲ್ಲಿ ಉಂಟಾಗುತ್ತಿರುವ ಶೀತಗಾಳಿಗೆ ಗುಂಟೂರಿನ ಪಲಪರ್ರುನ ಮುದ್ದಣ್ಣ ನಾರಾಯಣ (40) ಮತ್ತು ಹರಿತ (36) ಮೃತ ದಂಪತಿ. ಹರಿತ ದೇಹ ಮಂಗಳವಾರ ಪತ್ತೆಯಾಗಿದ್ದು, ಇಂದು ನಾರಾಯಣ ದೇಹವನ್ನು ರಕ್ಷಣಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಇನ್ನು, ಮತ್ತೊಬ್ಬ ತೆಲುಗು ನಾಡಿನ ನಿವಾಸಿ ಮಡಿಶೆಟ್ಟಿ ಗೋಖುಲ್ ಕೂಡ ಶೀತ ಮಾರುತದಿಂದ ಸಾವನ್ನಪ್ಪಿದ್ದು, ಅವರ ದೇಹಕ್ಕೆ ಹುಡುಕಾಟ ನಡೆಸಲಾಗಿದೆ.
ಕಳೆದ ಏಳು ವರ್ಷದಿಂದ ಆರಿಜೋನ್ನಲ್ಲಿ ನಾರಾಯಣ ದಂಪತಿ ನೆಲೆಸಿದ್ದರು. ರಜೆ ಹಿನ್ನೆಲೆ ಅವರು ಮಕ್ಕಳಾದ ಪೂಜಿತಾ (12) ಮತ್ತು ಹರ್ಷಿತಾ (10) ಜೊತೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಫೋಟೋ ತೆಗೆಯುವಾಗ ದಂಪತಿ ಆಕಸ್ಮಿಕವಾಗಿ ಕೆರೆಗೆ ಬಿದ್ದು, ಕಣ್ಮರೆಯಾದರು. ಇವರ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.