ಕರ್ನಾಟಕ

karnataka

ETV Bharat / bharat

ಕೆಲಸ ಮಾಡ್ತಿದ್ದ ವೇಳೆ ಸ್ಫೋಟಗೊಂಡ ಲ್ಯಾಪ್​ಟಾಪ್; ಯುವತಿಗೆ ಗಂಭೀರ ಗಾಯ - ಕೆಲಸ ಮಾಡ್ತಿದ್ದ ವೇಳೆ ಸ್ಫೋಟಗೊಂಡ ಲ್ಯಾಪ್​ಟಾಪ್

ಮನೆಯಲ್ಲಿ ಕೆಲಸ ಮಾಡ್ತಿದ್ದ ಸಂದರ್ಭದಲ್ಲಿ ಲ್ಯಾಪ್​ಟಾಪ್​ ಸ್ಫೋಟಗೊಂಡಿರುವ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

Working woman injured after laptop explodes
Working woman injured after laptop explodes

By

Published : Apr 18, 2022, 3:08 PM IST

ವಿಜಯವಾಡ(ಆಂಧ್ರಪ್ರದೇಶ):ಕೋವಿಡ್​ನಿಂದಾಗಿ ಬಹುತೇಕ ಕಂಪನಿಗಳು ವರ್ಕ್​ ಫ್ರಮ್ ಹೋಮ್ ಅವಕಾಶ ನೀಡಿವೆ. ಹೀಗಾಗಿ, ಈಗಲೂ ಬಹುತೇಕರು ಮನೆಯಿಂದಲೇ ಲ್ಯಾಪ್​ಟಾಪ್​​ ಮೂಲಕ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಕೆಲಸ ಮಾಡ್ತಿದ್ದ ಲ್ಯಾಪ್​ಟಾಪ್​​ ಸ್ಫೋಟಗೊಂಡು ಯುವತಿ ಗಾಯಗೊಂಡಿದ್ದಾರೆ.


ಕೆಲಸ ಮಾಡ್ತಿದ್ದ ವೇಳೆ ಲ್ಯಾಪ್​ಟಾಪ್​ ಚಾರ್ಜ್‌ಗೆ ಹಾಕಲಾಗಿತ್ತು. ಈ ವೇಳೆ ಬ್ಯಾಟರಿ ಸ್ಫೋಟಗೊಂಡಿದೆ. ಆಂಧ್ರಪ್ರದೇಶದ ವೈಎಸ್​​ಆರ್​ ಜಿಲ್ಲೆಯ ಬಿ. ಕೋಡೂರು ಮಂಡಲದ ಮೇಕವಾರಿಪಲ್ಲಿ ಗ್ರಾಮದಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ:ಮಲಗಿದ್ದ ಯೋಧರ ಮೇಲೆ ಲಾಂಚರ್​, ಬಂದೂಕುಗಳಿಂದ ನಕ್ಸಲರ​ ದಾಳಿ.. ನಾಲ್ವರಿಗೆ ಗಾಯ

ಆಂಧ್ರಪ್ರದೇಶದಲ್ಲಿರುವ ಸಾಫ್ಟ್​ವೇರ್ ಕಂಪನಿವೊಂದರಲ್ಲಿ ಸುಮತಿ ಕೆಲಸ ಮಾಡ್ತಿದ್ದಾರೆ. ಇಂದು ಬೆಳಗ್ಗೆ ಲ್ಯಾಪ್​ಟಾಪ್​ ಚಾರ್ಜ್ ಮಾಡಲು ಇಟ್ಟು ಅದರಲ್ಲಿ ಕೆಲಸ ಮಾಡ್ತಿದ್ದರು. ಈ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ತಾನು ಕೆಲಸ ಮಾಡ್ತಿದ್ದ ವೇಳೆ ರೂಂಗೆ ಯುವತಿ ಬೀಗ ಹಾಕಿಕೊಂಡಿದ್ದ ಕಾರಣ, ಆಕೆಯ ರಕ್ಷಣೆ ಮಾಡುವಲ್ಲಿ ಸ್ವಲ್ಪ ತಡವಾಗಿದೆ. ರೂಂನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸುಮತಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details