ಕರ್ನಾಟಕ

karnataka

ETV Bharat / bharat

ಇವ ಸಾಧಾರಣ ಕಳ್ಳನಲ್ಲ ಬಿಡಿ.. ಸುಮಾರು 111 ಬೈಕ್​ಗಳನ್ನು ಕದ್ದು ಮಾರಿದ ಭೂಪ! - ಆಂಧ್ರಪ್ರದೇಶದಲ್ಲಿ ಹಲವು ಬೈಕ್​ಗಳು ದರೋಡೆ

ಬೈಕ್ ಎಲ್ಲಿ ಕಾಣಿಸಿದರೂ ಕ್ಷಣಾರ್ಧದಲ್ಲಿ ಮಾಯಮಾಡುತ್ತಾನೆ.. ಒಂದು ಕಡೆ ಕದ್ದ ಬೈಕ್​ನ್ನು ಬೇರೆ ಕಡೆ ಜಾಣತನದಿಂದ ಮಾರಾಟ ಮಾಡುತ್ತಾನೆ. ಹೀಗೆ ಒಂದಲ್ಲ-ಎರಡಲ್ಲ ಬರೋಬ್ಬರಿ 111 ದ್ವಿಚಕ್ರ ವಾಹನಗಳನ್ನು ಕದ್ದು ಬೇರೆಯವರಿಗೆ ಮಾರಿದ್ದಾನೆ ಆ ಭೂಪ. ಆದ್ರೂ ಸಹಿತ ಒಮ್ಮೆಯೂ ಪೊಲೀಸರಿಗೆ ಕಳ್ಳ ಸಿಕ್ಕಿರಲಿಲ್ಲ. ಇವನ ಪ್ರತಿಭೆ ಎಲ್ಲೆಂದರಲ್ಲಿ ಪಸರಿಸಿತ್ತು.. ಈ ಪ್ರತಿಭಾವಂತನ ಸುದ್ದಿ ಪೊಲೀಸ್​ ಠಾಣೆಯವರಿಗೂ ಬಂದು ತಲುಪಿತು.

two wheeler thief in Andhra Pradesh, many bikes robbed in Andhra Pradesh, Andhra Pradesh crime news, ಆಂಧ್ರಪ್ರದೇಶದಲ್ಲಿ ದ್ವಿಚಕ್ರ ವಾಹನ ಕಳ್ಳನ ಬಂಧನ, ಆಂಧ್ರಪ್ರದೇಶದಲ್ಲಿ ಹಲವು ಬೈಕ್​ಗಳು ದರೋಡೆ, ಆಂಧ್ರಪ್ರದೇಶ ಅಪರಾಧ ಸುದ್ದಿ,
ಬೈಕ್​ ಕಳುವು

By

Published : Jun 25, 2022, 2:26 PM IST

ಕಾಕಿನಾಡ (ಆಂಧ್ರಪ್ರದೇಶ):ದ್ವಿಚಕ್ರ ವಾಹನ ಕಣ್ಣಿಗೆ ಬೀಳುವಷ್ಟರಲ್ಲಿ ಮಾಯ ಮಾಡಿ ಬಿಡ್ತಿದ್ದ. ಕದ್ದ ಬೈಕ್​ಗಳನ್ನು ಮಾರುವುದು ಇವನಿಗೆ ಬೆಣ್ಣೆ ಹಚ್ಚುವಷ್ಟು ಸುಲಭದ ಕೆಲಸವಾಗಿತ್ತು. ಹೀಗೆ ಒಂದಲ್ಲ, ಎರಡಲ್ಲ.. ಇಲ್ಲಿಯವರೆಗೆ ಸುಮಾರು 111 ದ್ವಿಚಕ್ರ ವಾಹನಗಳನ್ನು ಕದ್ದು ಮಾರಿದ್ದಾನೆ.

ಈ ಕಳ್ಳನ ಪ್ರತಿಭೆ ಕುರಿತು ಅವರಿವರು ಮಾತನಾಡಿಕೊಳ್ಳುತ್ತಿರುವ ಸಂಗತಿ ಜಿಲ್ಲೆಯ ಜಗ್ಗಂಪೇಟೆ ತಾಲೂಕಿನ ಮಲ್ಲಿಶಾಳದಲ್ಲಿ ಸಿಐ ಬಿ.ಸೂರ್ಯ ಅಪ್ಪಾರಾವ್ ಹಾಗೂ ಎಸ್ಐ.ಟಿ.ರಘುನಾಥರಾವ್ ತನಿಖೆ ಕೈಗೊಂಡಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಓದಿ:ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಲ್ಲಿ 16 ಬೈಕ್​ಗಳ ಕದ್ದ ಖದೀಮರು !

ಎಲೇಶ್ವರದ ನಾಡಿಗಟ್ಲ ಕೃಷ್ಣ ಜಗ್ಗಂಪೇಟೆಯಲ್ಲಿ ವಾಸಿಸುತ್ತಿದ್ದ. ತಣುಕು, ಮಂಡಪೇಟ, ರಾಜಮಹೇಂದ್ರವರಂ, ತುಣಿ, ಜಗ್ಗಂಪೇಟೆಯಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದು ಜಗ್ಗಂಪೇಟೆ ಪ್ರದೇಶ, ಗೋವಿಂದಪುರ, ರಾಜಪುಡಿ, ಕೃಷ್ಣಾಪುರ, ಮಾನ್ಯಂವಾರಿಪಾಲೆಂ, ಮಲ್ಲಿಸಾಳ ಮತ್ತಿತರ ಗ್ರಾಮಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಗೋವಿಂದಪುರದ ವ್ಯಕ್ತಿಯೊಬ್ಬರು ಏಕಾಏಕಿ 15 ಬೈಕ್ ಖರೀದಿಸಿ ಹಣ ಸಂಪಾದನೆ ಮಾಡಿರುವ ಬಗ್ಗೆ ವರದಿಯಾಗಿದೆ.

ಕದ್ದ ವಾಹನಗಳನ್ನು ಖರೀದಿಸಿದವರಿಗೆ ಪೊಲೀಸರು ದೂರವಾಣಿ ಮೂಲಕ ಕರೆ ಮಾಡಿ ಒಬ್ಬೊಬ್ಬರಾಗಿ ಠಾಣೆಗೆ ಕರೆಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಪೊಲೀಸ್​ ಠಾಣೆಯ ಆಸುಪಾಸಿನಲ್ಲಿ ಬೈಕ್ ನಿಲ್ಲಿಸಿ ನಿಧಾನವಾಗಿ ಜಾರುತ್ತಾರೆ. ವಾಹನ ಕಳವು ಪ್ರಕರಣದ ಮತ್ತೊಬ್ಬ ಆರೋಪಿ ತೆಲಂಗಾಣದ ಖಮ್ಮಂ ಸಬ್ ಜೈಲಿನಲ್ಲಿ ವಿಭಿನ್ನ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ವರದಿಯಾಗಿದೆ.

ABOUT THE AUTHOR

...view details