ಕರ್ನೂಲ್ (ಆಂಧ್ರಪ್ರದೇಶ):ಇಟಲಿಯಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವಿದ್ಯಾರ್ಥಿಯೋರ್ವ ಸಮುದ್ರ ಪಾಲಾಗಿದ್ದಾನೆ. 24 ವರ್ಷದ ದಿಲೀಪ್ ಮೃತ ವಿದ್ಯಾರ್ಥಿಯಾಗಿದ್ದು, ಬಾಲಾಜಿ ನಗರ ನಿವಾಸಿಗಳಾದ ಚಿಲುಮೂರು ಶ್ರೀನಿವಾಸಿ ರಾವ್ ಹಾಗೂ ಶಾರದಾದೇವಿ ದಂಪತಿಯ ಪುತ್ರ. ಇಟಲಿಯ ಮಿಲಾನ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಅಗ್ರಿ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
2019ರಲ್ಲಿ ಸೆಪ್ಟೆಂಬರ್ನಲ್ಲಿ ಇಟಲಿಗೆ ತೆರಳಿದ್ದ ದಿಲೀಪ್ ಕಳೆದ ವರ್ಷದ ಏಪ್ರಿಲ್ನಲ್ಲಿ ಸ್ವದೇಶಕ್ಕೆ ಬಂದಿದ್ದ. ನಂತರ ಮರಳಿ ಸೆಪ್ಟಂಬರ್ನಲ್ಲಿ ತೆರಳಿದಿದ್ದಾನೆ. ಇತ್ತೀಚೆಗೆ ಪೋಷಕರೊಂದಿಗೆ ಮಾತನಾಡಿದ್ದ ಆತ, ತನ್ನ ಓದು ಪೂರ್ಣಗೊಳಿಸಿ, ತಕ್ಷಣವೇ ಉದ್ಯೋಗ ಪಡೆದು ಮನೆಗೆ ಬರುವುದಾಗಿ ಹೇಳಿದ್ದನು.