ಆಂಧ್ರಪ್ರದೇಶ: ಇಲ್ಲಿನ ಪುರಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಮತದಾನವು ಸಂಜೆ 5ಗಂಟೆಗೆ ಕೊನೆಗೊಳ್ಳುತ್ತದೆ. 12 ನಿಗಮ, 71 ಪುರಸಭೆಗಳು ಮತ್ತು ನಗರ ಪಂಚಾಯಿತಿಗಳಲ್ಲಿ ಮತದಾನ ಕಾರ್ಯ ಭರದಿಂದ ಸಾಗಿದೆ.
ರಾಜ್ಯಾದ್ಯಂತ ಒಟ್ಟು 2,214 ವಾರ್ಡ್‌ಗಳಿಗೆ ಮತದಾನ ನಡೆಯುತ್ತಿದೆ. 12 ನಿಗಮಗಳ 671 ವಿಭಾಗಗಳಲ್ಲಿ 90 ಅವಿರೋಧ, 12 ನಿಗಮಗಳಲ್ಲಿ ಉಳಿದ 581 ವಿಭಾಗಗಳಿಗೆ ಮತದಾನ ಪ್ರಕ್ರಿಯೆ ಜರುಗಿದ್ದು. ಒಟ್ಟು 2569 ಸದಸ್ಯರು ಸ್ಪರ್ಧೆಯಲ್ಲಿದ್ದಾರೆ.
75 ಪುರಸಭೆಗಳು ಮತ್ತು ನಗರ ಪಂಚಾಯಿತಿಗಳಲ್ಲಿ ಒಟ್ಟು 2 ಸಾವಿರ 123 ವಾರ್ಡ್‌ಗಳೊಂದಿಗೆ 490 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1633 ವಾರ್ಡ್‌ಗಳನ್ನು ಮತದಾನ ನಡೆಯುತ್ತಿದೆ. ಒಟ್ಟು 4,981 ಸದಸ್ಯರು ಸ್ಪರ್ಧೆಯಲ್ಲಿದ್ದಾರೆ.