ಪ್ರಕಾಶಂ, ಆಂಧ್ರಪ್ರದೇಶ :ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿಯೇ ಪತ್ನಿಯ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಪುಲಿಪಾಡು ಮೂಲದ ಸತ್ಯನಾರಾಯಣ ಎಂಬುವರು ತಮ್ಮ ಪತ್ನಿಯ ಅಂತ್ಯಸಂಸ್ಕಾರಕ್ಕೆ ಸ್ವಂತ ಮನೆಯಲ್ಲಿಯೇ ವ್ಯವಸ್ಥೆ ಮಾಡಿದ್ದರು. ಗ್ರಾಮಸ್ಥರೇ ಸ್ಮಶಾನ ಭೂಮಿಯನ್ನು ಆಕ್ರಮಿಸಿದ್ದರ ಕಾರಣದಿಂದಾಗಿ ಆ ವ್ಯಕ್ತಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಪತ್ನಿಯ ಮೃತದೇಹದ ಅಂತ್ಯಕ್ರಿಯೆಗೆ ಯತ್ನ.. ಮುಂದಾಗಿದ್ದೇ ಬೇರೆ.. - ಮನೆಯಲ್ಲಿಯೇ ಮೃತದೇಹದ ಅಂತ್ಯಕ್ರಿಯೆಗೆ ನಿರ್ಧಾರ
ಸ್ಮಶಾನ ಭೂಮಿಯನ್ನು ಗ್ರಾಮಸ್ಥರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವ ತನ್ನ ಪತ್ನಿಯ ಅಂತ್ಯಸಂಸ್ಕಾರವನ್ನು ತನ್ನ ಮನೆಯಲ್ಲಿಯೇ ನೆರವೇರಿಸಲು ಮುಂದಾಗಿದ್ದ ಘಟನೆ ನಡೆದಿದೆ..
ಮನೆಯಲ್ಲಿ ಪತ್ನಿಯ ಮೃತದೇಹ ಅಂತ್ಯಕ್ರಿಯೆಗೆ ಯತ್ನ.. ಮುಂದೇನಾಯ್ತು?
ಘಟನೆ ಕುರಿತು ಗ್ರಾಮಸ್ಥರು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸತ್ಯನಾರಾಯಣ ಅವರಿಗೆ ಶವವನ್ನು ಸ್ಮಶಾನಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದು, ಪೊಲೀಸರ ಸೂಚನೆಯ ನಂತರ ಸತ್ಯನಾರಾಯಣ ಪತ್ನಿಯ ಮೃತದೇಹವನ್ನು ಸ್ಥಳಾಂತರ ಮಾಡಿದ್ದಾರೆ.
ಇದನ್ನೂ ಓದಿ:100 ಅಡಿ ಎತ್ತರದ ವಿದ್ಯತ್ ಟವರ್ ಏರಿ ಕುಳಿತ ಯುವಕ : ಕೆಳಗಿಳಿಸಲು ಹರಸಾಹಸ