ವಿಜಯವಾಡ (ಆಂಧ್ರಪ್ರದೇಶ): ಪ್ರಕಾಶಂ ಬ್ಯಾರೇಜ್ನ 20 ಗೇಟ್ಗಳ ಮೂಲಕ ಕೃಷ್ಣಾ ನದಿಯ 8,500 ಕ್ಯೂಸೆಕ್ ನೀರನ್ನು ಬಂಗಾಳಕೊಲ್ಲಿಗೆ ಬಿಡುಗಡೆ ಮಾಡಲಾಗಿದೆ. ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪುಲಿಚಿಂಟಾಲಾ ಯೋಜನೆಯಿಂದ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಬ್ಯಾರೇಜ್ ಗೇಟ್ಗಳನ್ನು ತೆರೆಯಲಾಗಿದೆ ಎಂದು ಎಂಜಿನಿಯರ್ಗಳು ತಿಳಿಸಿದ್ದಾರೆ.
ತೆಲಂಗಾಣ ಅಧಿಕಾರಿಗಳು ವಿದ್ಯುತ್ ಉತ್ಪಾದನೆಗಾಗಿ 6,600 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದಾರೆ. ಜಲಾನಯನ ಪ್ರದೇಶದಲ್ಲಿ 1,900 ಕ್ಯೂಸೆಕ್ ನೀರನ್ನು ನಾವು ಪಡೆಯುತ್ತಿದ್ದೇವೆ. 8,500 ಕ್ಯೂಸೆಕ್ ನೀರನ್ನು ಪ್ರಕಾಶಂ ಬ್ಯಾರೇಜ್ ಗೇಟ್ ಮೂಲಕ ಹೊರಬಿಡಲಾಗಿದೆ. ನಾವೀಗ 20 ಗೇಟ್ಗಳನ್ನು ನಿರ್ವಹಿಸುತ್ತಿದ್ದೇವೆ. ನೀರಿನ ಒಳಹರಿವು ಅವಲಂಬಿಸಿ, ಹೆಚ್ಚಿನ ನೀರನ್ನು ಬಿಡಬಹುದು ಅಥವಾ ಇಲ್ಲಿಗೆ ನಿಲ್ಲಿಸಬಹುದು ಎಂದು ಬ್ಯಾರೇಜ್ನ ಕಾರ್ಯ ನಿರ್ವಾಹಕ ಎಂಜಿನಿಯರ್ ಸ್ವರೂಪ್ ಕುಮಾರ್ ತಿಳಿಸಿದ್ದಾರೆ.
ಪುಲಿಚಿಂಟಲಾ ಯೋಜನೆಯ ನೀರಿನ ಸಂಗ್ರಹ ಸಾಮರ್ಥ್ಯ 41 ಟಿಎಂಸಿ. ಇದರಿಂದ ತೆಲಂಗಾಣ ಸರ್ಕಾರವು ವಿದ್ಯುತ್ ಉತ್ಪಾದಿಸುತ್ತದೆ. ಆಂಧ್ರ ಪ್ರದೇಶದ ನೀರಾವರಿ ಇಲಾಖೆಯು ಅಗತ್ಯಗಳಿಗಾಗಿ ನೀರು ಬಿಡುಗಡೆ ಮಾಡಲು ಯಾವುದೇ ಪ್ಲಾನ್ ಮಾಡಿಲ್ಲ. ಹಾಗಾಗಿ ನೀರಿನ ಸಂಗ್ರಹ ಮತ್ತು ಸದ್ಬಳಕೆಗೆ ತೊಂದರೆಯಾಗಿದೆ. ಈಗ ರಾಜ್ಯ ನೀರಾವರಿ ಇಲಾಖೆಯ ಮುಂದೆ ಇದ್ದ ಏಕೈಕ ಮಾರ್ಗ ಬಂಗಾಳ ಕೊಲ್ಲಿಗೆ ನೀರನ್ನು ಬಿಡುವುದಾಗಿತ್ತು.