ವಿಜಯವಾಡ(ಆಂಧ್ರಪ್ರದೇಶ):ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಆಂಧ್ರಪ್ರದೇಶ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ 11 ಪ್ರಕರಣ Suo Moto ದಾಖಲು ಮಾಡಿಕೊಂಡಿದೆ. ಜಗನ್ ಮೋಹನ್ ರೆಡ್ಡಿ ಈ ಹಿಂದೆ(2016) ಪ್ರತಿಪಕ್ಷದಲ್ಲಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಬಗ್ಗೆ ಮಾಡಿದ್ದ ಕೆಲವೊಂದು ಕಮೆಂಟ್ಸ್ಗಳ ಆಧಾರದ ಮೇಲೆ ಈ ಕೇಸ್ ದಾಖಲಾಗಿವೆ.
ಇದರ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕಣ್ಣಂಗೇಟಿ ಲಲಿತಾ, ಪೊಲೀಸರಿಗೆ ನೋಟಿಸ್ ಜಾರಿ ಮಾಡುವುದನ್ನ ತಪ್ಪಿಸಿದ್ದಾರೆ. ಆದರೆ ಹೈಕೋರ್ಟ್ನ ಆಡಳಿತಾತ್ಮಕ ಸಮಿತಿಯ ಶಿಫಾರಸಿನ ಮೇರೆಗೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿದೆ. ವಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಜಗನ್ ಮೋಹನ್ ಅಡ್ವೊಕೇಟ್ ಜನರಲ್ ಸುಬ್ರಮಣ್ಯಂ ಶ್ರೀರಾಮ್ ವಿರುದ್ಧ ಹಾಗೂ ನ್ಯಾಯಾಲಯದ ಕುರಿತು ಕಮೆಂಟ್ ಮಾಡಿದ್ದರು.
ಇದನ್ನೂ ಓದಿರಿ: Bigg Boss Kannada: ಸುದೀಪ್ ಮುಂದೆ ಹೇಳಿದ ಮಾತು ಮರೆತು ಈ ಕೆಲಸ ಮಾಡಿದ ಪಾವಗಡ!