ಆಂಧ್ರಪ್ರದೇಶ:ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಆನಂದಯ್ಯ ಆಯುರ್ವೇದ ಔಷಧ ವಿತರಣೆಗೆ ಎಪಿ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ರಾಷ್ಟ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ (ಸಿಸಿಆರ್‌ಎಎಸ್) ಸಮಿತಿಯ ವರದಿಯ ಪ್ರಕಾರ ಆಂಧ್ರಪ್ರದೇಶ ಸರ್ಕಾರ ಔಷಧಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ಹೈಕೋರ್ಟ್ನಲ್ಲಿ ವಿಚಾರಣೆ ಬಾಕಿ ಇತ್ತು. ಇಂದು ಹೈ ಕೋರ್ಟ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ.
ತೀರ್ಪು ಸಕಾರಾತ್ಮಕವಾಗಿ ಬಂದಿದ್ದು, ನಾಳೆಯಿಂದಲೇ ಔಷಧ ವಿತರಿಸಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.