ಕರ್ನಾಟಕ

karnataka

ETV Bharat / bharat

ಆಂಧ್ರಪ್ರದೇಶಕ್ಕಿನ್ನು ಅಮರಾವತಿಯೊಂದೇ ರಾಜಧಾನಿ: 3 ರಾಜಧಾನಿ ಮಸೂದೆ ಹಿಂಪಡೆದ ಜಗನ್​ ಸರ್ಕಾರ - ಆಂಧ್ರಪ್ರದೇಶ ಹೈಕೋರ್ಟ್​​

ಆಂಧ್ರಪ್ರದೇಶಕ್ಕೆ 3 ರಾಜಧಾನಿಗಳನ್ನು ಹೊಂದುವ ಮಸೂದೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮುಖ್ಯಮಂತ್ರಿ ವೈ.ಎಸ್​. ಜಗನ್​ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರ ಮಸೂದೆಯನ್ನು ಹಿಂಪಡೆಯುವ(Andhra Pradesh government withdrawn the three-capital proposal)ನಿರ್ಧಾರ ಕೈಗೊಂಡಿದೆ.

andhra-pradesh-govt-withdraws-three-capital
andhra-pradesh-govt-withdraws-three-capital

By

Published : Nov 22, 2021, 1:24 PM IST

Updated : Nov 22, 2021, 2:39 PM IST

ಅಮರಾವತಿ(ಆಂಧ್ರಪ್ರದೇಶ):ಆಂಧ್ರಪ್ರದೇಶಕ್ಕೆ 3 ರಾಜಧಾನಿ(withdraws 3 capitals bill) ಗಳನ್ನು ಹೊಂದುವ ಮಸೂದೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮುಖ್ಯಮಂತ್ರಿ ವೈ.ಎಸ್​. ಜಗನ್​ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರ ಮಸೂದೆ ಹಿಂಪಡೆಯುವ ನಿರ್ಧಾರ ಕೈಗೊಂಡಿದೆ. ಹೀಗಾಗಿ ಅಮರಾವತಿ ಆಂಧ್ರಪ್ರದೇಶದ ರಾಜಧಾನಿಯಾಗಿ ಮುಂದುವರಿಯಲಿದೆ.

ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆದ ಬಳಿಕ ಮಸೂದೆಯನ್ನು ಹಿಂಪಡೆಯಲು ಸಂಪುಟ ತೀರ್ಮಾನಿಸಿದೆ. ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿ, ಅಮರಾವತಿ ಶಾಸಕಾಂಗ, ಕರ್ನೂಲ್‌ ಅನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ರೂಪಿಸುವುದು ಜಗನ್‌ ಸರ್ಕಾರದ ಉದ್ದೇಶವಾಗಿತ್ತು.

ಸೋಮವಾರವಷ್ಟೇ ಈ ಕುರಿತ ಮಸೂದೆಯನ್ನು ವಿಧಾನಸಭೆ ಮತ್ತು ವಿಧಾನಮಂಡಲದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿತ್ತು. ಇದಕ್ಕೆ ಪ್ರತಿಪಕ್ಷಗಳು ಮತ್ತು ಅಮರಾವತಿ ರಾಜಧಾನಿಗಾಗಿ ಭೂಮಿ ನೀಡಿದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ-2019 ಅಳವಡಿಕೆ ವಿಚಾರ; ಜಂಟಿ ಸಂಸದೀಯ ಸಮಿತಿ ಸಭೆ ಆರಂಭ

ಈ ಹಿನ್ನೆಲೆಯಲ್ಲಿ ಜಗನ್​ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರ ಮಸೂದೆಗಳನ್ನು ವಾಪಸ್​ ಪಡೆದುಕೊಂಡಿದೆ. ಈ ಬಗ್ಗೆ ಸರ್ಕಾರ ಮಂಡಿಸಿದ ಮಸೂದೆಗಳನ್ನು ಹಿಂಪಡೆಯಲಾಗಿದೆ ಎಂದು ಆಂಧ್ರಪ್ರದೇಶ ಹೈಕೋರ್ಟ್​ಗೆ ಅಡ್ವೋಕೇಟ್​ ಜನರಲ್​ ಮಾಹಿತಿ ನೀಡಿದ್ದಾರೆ. ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಹೊಂದುವುದರ ವಿರುದ್ಧ ರೈತರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

Last Updated : Nov 22, 2021, 2:39 PM IST

ABOUT THE AUTHOR

...view details