ಅಮರಾವತಿ(ಆಂಧ್ರಪ್ರದೇಶ) :ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಶಾಲೆಗಳನ್ನು ಆಗಸ್ಟ್ 16ರಿಂದ ಪುನಾರಂಭಿಸಲು ಆಂಧ್ರಪ್ರದೇಶ ಸರ್ಕಾರ ತೀರ್ಮಾನಿಸಿದೆ. ಆನ್ಲೈನ್ ಕ್ಲಾಸ್ಗಳಿಗೆ ಜುಲೈ 12ರಿಂದ ಅನುಮತಿ ನೀಡಲಾಗಿದೆ. ರಾಜ್ಯ ಶಿಕ್ಷಣ ಇಲಾಖೆಯ ನಾಡು-ನೇಡು ಪರಿಶೀಲನೆ ನಡೆಸಿದ ಸಿಎಂ ಜಗನ್ ಮೋಹನ್ ರೆಡ್ಡಿ, ನಾಡ-ನೇಡು ಕಾರ್ಯಕ್ರಮದಲ್ಲಿನ ಬಾಕಿ ಕೆಲಸಗಳನ್ನು ಆಗಸ್ಟ್ ತಿಂಗಳೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.
ಜುಲೈ 15ರಿಂದ ಶಿಕ್ಷಕರಿಗೆ ವರ್ಕ್ ಬುಕ್ಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಆಗಸ್ಟ್ 15ರವರೆಗೆ ಮುಂದುವರೆಯುತ್ತದೆ ಎಂದು ಎಂದು ಜಗನ್ ಮಾಹಿತಿ ನೀಡಿದ್ದಾರೆ.