ಕರ್ನಾಟಕ

karnataka

ETV Bharat / bharat

ಕೆಸಿಆರ್ ಸಂಬಂಧಿಗಳ ಕಿಡ್ನಾಪ್​ ಪ್ರಕರಣ: ಆಂಧ್ರಪ್ರದೇಶ ಮಾಜಿ ಸಚಿವೆ ಬಂಧನ

ತೆಲಂಗಾಣ ಸಿಎಂ ಕೆಸಿಆರ್ ಸಂಬಂಧಿಗಳ ಕಿಡ್ನಾಪ್​ ಪ್ರಕರಣ ಸಂಬಂಧ ಆಂಧ್ರಪ್ರದೇಶದ ಮಾಜಿ ಸಚಿವೆ ಮತ್ತು ಟಿಡಿಪಿ ಮುಖಂಡೆ ಭೂಮಾ ಅಖಿಲಪ್ರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

andhra-pradesh-ex-minister-arrested-in-telangana-cms-relatives-kidnapping-case
ಕೆಸಿಆರ್ ಸಂಬಂಧಿಗಳ ಕಿಡ್ನಾಪ್​ ಪ್ರಕರಣ

By

Published : Jan 7, 2021, 8:06 AM IST

ಹೈದರಾಬಾದ್:ತೆಲಂಗಾಣ ಸಿಎಂ ಕೆಸಿಆರ್ ಸಂಬಂಧಿಗಳ ಕಿಡ್ನಾಪ್​ ಪ್ರಕರಣ ಸಂಬಂಧ ಆಂಧ್ರಪ್ರದೇಶದ ಮಾಜಿ ಸಚಿವೆ ಮತ್ತು ಟಿಡಿಪಿ ಮುಖಂಡೆ ಭೂಮಾ ಅಖಿಲಪ್ರಿಯಾ ಹಾಗೂ ಪಕ್ಷದ ಮುಖಂಡ ಅವಿ ಸುಬ್ಬರೆಡ್ಡಿ ಅವರನ್ನು ಕರ್ನೂಲ್​​ ಅಲ್ಲಗಡ್ಡದ ಪೊಲೀಸರು ಬಂಧಿಸಿದ್ದಾರೆ.

ಕೆಸಿಆರ್ ಸಂಬಂಧಿಗಳಾದ ರಾಷ್ಟ್ರೀಯ ಬ್ಯಾಡ್ಮಿಂಟನ್ ಮಾಜಿ ಆಟಗಾರ ಪ್ರವೀಣ್ ರಾವ್, ಅವರ ಸಹೋದರರಾದ ನವೀನ್, ಸುನೀಲ್ ಅವರನ್ನು ಅಪಹರಣ ಮಾಡಲಾಗಿತ್ತು, ಬಳಿಕ ಈ ಮೂವರನ್ನೂ ಅಪಹರಣಕಾರರು ಬಿಡುಗಡೆ ಮಾಡಿದ್ದರು.

ಹಫೀಜ್‌ಪೇಟ್‌ನಲ್ಲಿನ 2 ಸಾವಿರ ಕೋಟಿ ರೂ. ಮೌಲ್ಯದ ಜಾಗದ ಸಂಬಂಧ ಈ ಮೂವರನ್ನು ಅಪಹರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹಫೀಜ್‌ಪೇಟ್‌ನಲ್ಲಿನ ಜಮೀನನ್ನು ತನ್ನ ತಂದೆ ಭೂಮಾ ನಾಗರೆಡ್ಡಿಗೆ ಹಿಂದಿರುಗಿಸುವಂತೆ ಅಖಿಲಪ್ರಿಯಾ ಪ್ರವೀಣ್ ರಾವ್ ಸಹೋದರರಿಗೆ ಬೆದರಿಕೆ ಹಾಕಿದ್ದ ಬಗ್ಗೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: ತೆಲಂಗಾಣ ಸಿಎಂ ಕೆಸಿಆರ್ ಸಂಬಂಧಿಗಳೇ ಕಿಡ್ನಾಪ್: ಕೊನೆಗೂ ಪ್ರಕರಣ ಸುಖಾಂತ್ಯ

ಬಂಧಿತ ಅಖಿಲಪ್ರಿಯಾರನ್ನು ಕೋರ್ಟ್​ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಅಖಿಲಪ್ರಿಯಾರನ್ನು ಚಂಚಲ್ಗುಡ ಮಹಿಳಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಪ್ರಕರಣ ಸಂಬಂಧ ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details