ಅಮರಾವತಿ (ಆಂಧ್ರಪ್ರದೇಶ): ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಒಂದು ಕಿಲೋ ಮೀಟರ್ಗೆ ಒಂದು ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ (Foundational Scool) ಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಪೂರ್ವ-ಪ್ರಾಥಮಿಕ (ಅಂಗನವಾಡಿ ಕೇಂದ್ರ), 1 ಮತ್ತು 2 ತರಗತಿಗಳನ್ನು ವಿಲೀನಗೊಳಿಸುವ ಮೂಲಕ ಚಟುವಟಿಕೆ ಆಧಾರಿತ ಶಾಲೆಗಳನ್ನು ತೆರೆಯಲು ಸಿಎಂ ತಿಳಿಸಿದ್ದಾರೆ.
ಈ ಯೋಜನೆ ಮಗುವಿನ ಶೈಕ್ಷಣಿಕ ಕಲಿಕೆಗೆ ಸಹಾಯ ಮಾಡುತ್ತದೆ. ಈ ಶಾಲೆಗಳು ಪ್ರತಿ ಒಂದು ಕಿಲೋ ಮೀಟರ್ಗೆ ಒಂದರಂತೆ ಇರಬೇಕು. ಪ್ರೌಢಶಾಲೆಗಳು ಪ್ರತಿ 3 ಕಿಲೋ ಮೀಟರ್ಗೆ ಒಂದರಂತೆ ಇರಬೇಕು. ಪ್ರಾಥಮಿಕ ಶಾಲೆಯಲ್ಲಿ 3 ರಿಂದ 8 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.