ಕರ್ನಾಟಕ

karnataka

ETV Bharat / bharat

ಮಾರ್ಗದರ್ಶಿ ಚಿಟ್‌ಫಂಡ್‌ ಶಾಖೆಗಳಿಗೆ ನೀಡಿದ್ದ ಆಂಧ್ರ ಪೊಲೀಸರ ಎಲ್ಲ ನೋಟಿಸ್‌ಗಳನ್ನು ಅಮಾನತುಗೊಳಿಸಿದ ಹೈಕೋರ್ಟ್

ಮಾರ್ಗದರ್ಶಿ ಚಿಟ್​ಫಂಡ್​ ಸಂಸ್ಥೆಯ ಮೂರು ಶಾಖೆಗಳ ಬ್ಯಾಂಕ್​ ಖಾತೆಗಳನ್ನು ಸ್ಥಗಿತಗೊಳಿಸಬೇಕೆಂಬ ಆಂಧ್ರ ಪ್ರದೇಶದ ಪೊಲೀಸ್​ ನೋಟಿಸ್​ಗಳನ್ನು ಹೈಕೋರ್ಟ್​ ಅಮಾನತುಗೊಳಿಸಿದೆ.

margadarsi
ಮಾರ್ಗದರ್ಶಿ

By ETV Bharat Karnataka Team

Published : Oct 19, 2023, 7:29 PM IST

ಅಮರಾವತಿ (ಆಂಧ್ರಪ್ರದೇಶ): ಮಾರ್ಗದರ್ಶಿ ಚಿಟ್​ಫಂಡ್​ ಸಂಸ್ಥೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆಂಧ್ರ ಪ್ರದೇಶದ ಸರ್ಕಾರಕ್ಕೆ ಹೈಕೋರ್ಟ್​ನಲ್ಲಿ ಇಂದು ಭಾರಿ ಹಿನ್ನಡೆಯಾಗಿದೆ. ಮಾರ್ಗದರ್ಶಿಗೆ ಸೇರಿದ ಮೂರು ಶಾಖೆಗಳ ಬ್ಯಾಂಕ್​ ಖಾತೆಗಳನ್ನು ಸ್ಥಗಿತಗೊಳಿಸಬೇಕೆಂಬ ಪೊಲೀಸ್​ ನೋಟಿಸ್​ಗಳನ್ನು ನ್ಯಾಯಾಲಯ ಅಮಾನತು ಮಾಡಿತು.

ಚಿರಾಲ, ವಿಶಾಖ, ಸೀತಂಪೇಟ್ ಬ್ರಾಂಚ್​ಗಳಲ್ಲಿರುವ ಬ್ಯಾಂಕ್​ ಖಾತೆಗಳನ್ನು ಸ್ಥಗಿತಗೊಳಿಸುವ ಕುರಿತಾಗಿ ಮಾರ್ಗದರ್ಶಿ ಬ್ರಾಂಚ್​ ಮ್ಯಾನೇಜರ್​ಗಳಿಗೆ ಪೊಲೀಸರು ನೋಟಿಸ್​ಗಳನ್ನು ನೀಡಿದ್ದರು. ಈ ನೋಟಿಸ್‌ಗಳನ್ನು ಮ್ಯಾನೇಜರ್​ಗಳು ಆಂಧ್ರಪ್ರದೇಶ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಪೊಲೀಸ್​ ನೋಟಿಸ್​ಗಳನ್ನು ಅಮಾನತುಗೊಳಿಸಿದೆ.

ಮತ್ತೊಂದೆಡೆ, ಪೋರ್ಜರಿ ಮೂಲಕ ಷೇರುಗಳಿಗೆ ವರ್ಗಾವಣೆ ಆರೋಪದಡಿ ಜಿ.ಯೂರಿ ರೆಡ್ಡಿ ಎಂಬವರು ನೀಡಿದ ದೂರಿನಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರಾಮೋಜಿ ರಾವ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರಿಗೆ ಬುಧವಾರ ನ್ಯಾಯಾಲಯ ರಿಲೀಫ್​ ನೀಡಿತ್ತು. ಇದಕ್ಕೆ ಪೂರಕವಾಗಿ ಆಂಧ್ರ ಪೊಲೀಸರ ನೋಟಿಸ್​ ವಿಷಯದಲ್ಲಿ ಹೈಕೋರ್ಟ್​ನ ಈ ಆದೇಶ ಬಂದಿದೆ.

ಷೇರುಗಳ ವರ್ಗಾವಣೆ ಆರೋಪ ಪ್ರಕರಣದಲ್ಲಿ ರಾಜ್ಯ ಸಿಐಡಿ ಅಧಿಕಾರ ವ್ಯಾಪ್ತಿಯ ಬಗ್ಗೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಐಡಿ ದಾಖಲಿಸಿದ್ದ ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಎಂಟು ವಾರಗಳ ಕಾಲ ಅಮಾನತುಗೊಳಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಆಂಧ್ರಪ್ರದೇಶದ ಸಿಐಡಿ ಮಾರ್ಗದರ್ಶಿ ಚಿಟ್​ಫಂಡ್​ ಸಂಸ್ಥೆಯ ವ್ಯವಹಾರ ಮತ್ತು ಗ್ರಾಹಕರ ನೆಟ್​ವರ್ಕ್​ಗೆ ಹಾನಿ ಮಾಡುವ 'ದುರುದ್ದೇಶ' ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.

"ವೈಯಕ್ತಿಕ ವಿವರಗಳನ್ನು ಕೇಳುವ ಮೂಲಕ ನಮ್ಮ ಎಲ್ಲ ಚಂದಾದಾರರಲ್ಲಿ ಭೀತಿ ಸೃಷ್ಟಿಸಲು ಮತ್ತು ಅವರಿಗೆ ಕಿರುಕುಳ ನೀಡುವ ಉದ್ದೇಶ ಹೊಂದಿದೆ. ಮಾರ್ಗದರ್ಶಿ ಗ್ರಾಹಕರ ನೆಟ್‌ವರ್ಕ್‌ಗೆ ಹಾನಿ ಮಾಡುವ ದುರುದ್ದೇಶದಿಂದ ಆಂಧ್ರದ ಸಿಐಡಿ ತನ್ನ ವಿಚಾರಣೆಗಳನ್ನು ಮುಂದುವರೆಸಿದೆ'' ಕಂಪನಿಯು ತನ್ನ ಹೇಳಿಕೆಯಲ್ಲಿ ಹೇಳಿದೆ.

ಇದನ್ನೂ ಓದಿ:ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣ: ಆಂಧ್ರ ಸಿಐಡಿ ತನಿಖೆಗೆ ತಡೆ ನೀಡಿ ಹೈಕೋರ್ಟ್‌ ಮಧ್ಯಂತರ ಆದೇಶ

ABOUT THE AUTHOR

...view details