ಕರ್ನಾಟಕ

karnataka

ETV Bharat / bharat

ಟಿಪ್ಪು ಹೆಸರಲ್ಲಿ ಜಗನ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಿದೆ: ಸುನಿಲ್ ದಿಯೋಧರ್ - ಟಿಪ್ಪು ಸುಲ್ತಾನ್ ಲೇಟೆಸ್ಟ್ ನ್ಯೂಸ್

YSRP ಸರ್ಕಾರವು ಈಗಾಗಲೇ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವಲ್ಲಿ ನಿರತವಾಗಿದೆ. ಈಗ ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ, ಮುಸ್ಲಿಮರು ಹೆಚ್ಚಿರುವ ಕಡಪದಲ್ಲಿ ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಸ್ಥಳೀಯ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದು ಬಿಜೆಪಿ ಸಹ ಉಸ್ತುವಾರಿ ಸುನಿಲ್ ದಿಯೋಧರ್ ದೂರಿದ್ದಾರೆ.

ಬಿಜೆಪಿ ನಾಯಕ ಸುನಿಲ್ ದಿಯೋಧರ್
ಬಿಜೆಪಿ ನಾಯಕ ಸುನಿಲ್ ದಿಯೋಧರ್

By

Published : Jun 19, 2021, 8:25 PM IST

ನವದೆಹಲಿ:ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರವು ವೋಟ್​ಬ್ಯಾಂಕ್​ ರಾಜಕೀಯ ಮಾಡುತ್ತಿದ್ದು, ಅದಕ್ಕಾಗಿ ಕಡಪ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಿಸಲು ಮುಂದಾಗಿದೆ ಎಂದು ರಾಜ್ಯದ ಬಿಜೆಪಿ ಸಹ ಉಸ್ತುವಾರಿ ಸುನಿಲ್ ದಿಯೋಧರ್ ಆರೋಪಿಸಿದ್ದಾರೆ.

ಜಗನ್​ ಸರ್ಕಾರ ಕಡಪ ಜಿಲ್ಲೆಯಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ ಟಿಪ್ಪು ಪ್ರತಿಮೆ ನಿರ್ಮಿಸುವುದಕ್ಕೆ ಮುಂದಾಗಿದೆ. ಇದರ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ದಿಯೋಧರ್​​ ತಿಳಿಸಿದ್ದಾರೆ.

‘ಟಿಪ್ಪು ಸುಲ್ತಾನ್ ಸಾವಿರಾರು ಹಿಂದೂಗಳನ್ನು ಕೊಂದು ಲಕ್ಷಾಂತರ ಹಿಂದೂಗಳನ್ನು ಇಸ್ಲಾಂಗೆ ಪರಿವರ್ತಿಸಿದ ಅನಾಗರಿಕ ರಾಜ. ಜಗನ್ ಮೋಹನ್ ರೆಡ್ಡಿ ಸರ್ಕಾರದ ಇಂಥ ದುಷ್ಕೃತ್ಯವನ್ನು ನಾವು ಸಹಿಸುವುದಿಲ್ಲ’ ಎಂದು ಅವರು ದಿಯೋಧರ್ ಹೇಳಿದ್ದಾರೆ. YSRCP ಸರ್ಕಾರವು ಈಗಾಗಲೇ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವಲ್ಲಿ ನಿರತವಾಗಿದೆ. ಈಗ ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ, ಮುಸ್ಲಿಮರು ಹೆಚ್ಚಿರುವ ಕಡಪದಲ್ಲಿ ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಸ್ಥಳೀಯ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದು ದೂರಿದ್ದಾರೆ.

ಇದರ ವಿರುದ್ಧ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಹಲವರನ್ನು ಬಂಧಿಸಲಾಯಿತು. ಆದರೆ, ನಾವು ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ದೊಡ್ಡ ಪ್ರಮಾಣದ ಹೋರಾಟ ನಡೆಸಲಿದ್ದೇವೆ ಎಂದರು. ಈ ಪ್ರದೇಶದಲ್ಲಿ ಟಿಪ್ಪು ಪ್ರತಿಮೆ ನಿರ್ಮಿಸುವುದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details