ಅಮರಾವತಿ:ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಜ.21ರಂದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಭಾಗವಾದ 2,500 'ಮೊಬೈಲ್ ವಿತರಣಾ ಘಟಕ' (ಎಂಡಿಯು) ವಾಹನಗಳನ್ನು ವಿಜಯವಾಡದಲ್ಲಿ ಉದ್ಘಾಟಿಸಿದರು.
ಇವು ರಾಜ್ಯದಾದ್ಯಂತ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಪಡಿತರ ಮತ್ತು ಗುಣಮಟ್ಟದ ಅಕ್ಕಿಯನ್ನು ಪೂರೈಸಲಿವೆ.
"ಫೆಬ್ರವರಿ 1 ರಿಂದ ಗುಣಮಟ್ಟದ ಅಕ್ಕಿ ಮತ್ತು ಪಡಿತರವನ್ನು 9,260 ವಾಹನಗಳ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುವುದು. ಈ ಯೋಜನೆಗೆ ಸರ್ಕಾರ 830 ಕೋಟಿ ರೂ. ವೆಚ್ಚ ಮಾಡಲಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಸ್ವಯಂಸೇವಕ ವ್ಯವಸ್ಥೆಯನ್ನು ಬಳಸಿಕೊಂಡು, ಕಾರ್ಡ್‌ದಾರರ ಬೆರಳಚ್ಚನ್ನು ತೆಗೆದುಕೊಂಡು ಮರುಬಳಕೆ ಮಾಡಬಹುದಾದ ಚೀಲಗಳಲ್ಲಿ ಪಡಿತರವನ್ನು ನಿಖರವಾದ ತೂಕದೊಂದಿಗೆ ಪೂರೈಸಲಾಗುವುದು. ಈ ಮೂಲಕ ಗುಣಮಟ್ಟದ ಅಕ್ಕಿಯನ್ನು ವಿತರಿಸಲಾಗುವುದು. ಪ್ರತಿ ಅಕ್ಕಿ ಚೀಲವನ್ನು ಮೊಹರು ಮಾಡಿ ಅನನ್ಯ ಸೀಲ್ನೊಂದಿಗೆ ಟ್ಯಾಗ್ ಮಾಡಲಾಗಿದೆ." ಎಂದು ಅಧಿಕಾರಿ ಹೇಳಿದ್ದಾರೆ.