ಕರ್ನಾಟಕ

karnataka

ETV Bharat / bharat

ಪಬ್​ಜಿ ಗೇಮ್ ಸೋತಿದ್ದಕ್ಕೆ ಸ್ನೇಹಿತರಿಂದ ಗೇಲಿ: ನೇಣಿಗೆ ಶರಣಾದ ಕಾಂಗ್ರೆಸ್​ ಮುಖಂಡನ ಮಗ! - ಆಂಧ್ರಪ್ರದೇಶದಲ್ಲಿ ಪಬ್​ಜಿ ಗೇಮ್ ಸೋತಿದ್ದಕ್ಕೆ ಬಾಲಕ ಆತ್ಮಹತ್ಯೆ

ಮಚಲಿಪಟ್ಟಣಂನ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರ ಮಗ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Andhra boy kills self after friends mock him over defeat in PUBG
ಪಬ್​ಜಿ ಗೇಮ್ ಸೋತಿದ್ದಕ್ಕೆ ಸ್ನೇಹಿತರಿಂದ ಗೇಲಿ: ಫ್ಯಾನ್​ಗೆ ನೇಣು ಬಿಗಿದುಕೊಂಡ ಬಾಲಕ!

By

Published : Jun 12, 2022, 6:01 PM IST

ಮಚಲಿಪಟ್ಟಣಂ (ಆಂಧ್ರಪ್ರದೇಶ): ಪಬ್​ಜಿ ಗೇಮ್ ಸೋತಿದ್ದಕ್ಕೆ ಸ್ನೇಹಿತರು ಗೇಲಿ ಮಾಡಿದ್ದಾರೆ ಎಂಬ ಕ್ಷುಲ್ಲಕ ಕಾರಣದಿಂದ 16 ವರ್ಷದ ಬಾಲಕನೋರ್ವ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಭಾನುವಾರ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂನಲ್ಲಿ ನಡೆದಿದೆ.

ಬಾಲಕನ ತಂದೆ ಶಾಂತಿರಾಜ್ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರಾಗಿದ್ದಾರೆ. ಮೃತ ಬಾಲಕ ಪಬ್​ಜಿ ಆಟಕ್ಕೆ ದಾಸನಾಗಿದ್ದ. ಇಂದು ಕೂಡ ತನ್ನ ಸ್ನೇಹಿತರೊಂದಿಗೆ ಆಟ ಆಡಿದ್ದಾನೆ. ಆದರೆ, ಆಟದಲ್ಲಿ ಸೋತಾಗ ಸ್ನೇಹಿತರು ಅಪಹಾಸ್ಯ ಮಾಡಿದ್ದಾರೆ ಎನ್ನಲಾಗ್ತಿದೆ. ಇದರಿಂದ ಅವಮಾನಗೊಂಡಂತೆ ಆಗಿ ಮನೆಗೆ ಬಂದು ಫ್ಯಾನ್​ಗೆ ಬಾಲಕ ನೇಣು ಬಿಗಿದುಕೊಂಡಿದ್ದಾನೆ. ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಇತ್ತ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ತಾಂತಿಯಾ ಕುಮಾರಿ ಪಕ್ಷದ ಮುಖಂಡರಾದ ಶಾಂತಿರಾಜ್ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಬ್​ಜಿನಂತಹ ಆನ್​ಲೈನ್​ ಗೇಮ್​​ಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.

ದೇಶದಲ್ಲಿ 2019ರಲ್ಲಿ ಪಬ್​ಜಿ ಗೇಮ್​​ ನಿಷೇಧಿಸಲಾಗಿದೆ. ಆದರೆ, ಇತ್ತೀಚೆಗೆ ಇಂತಹದ್ದೇ ಗೇಮ್​ಗಳು ಬೇರೆ ಹೆಸರಿನಲ್ಲಿ ಸಾಕಷ್ಟು ಇವೆ.

ಇದನ್ನೂ ಓದಿ:ಪಬ್​​ಜಿ ಚಟಕ್ಕೆ ಹೆತ್ತಮ್ಮನ ಕೊಲೆ: ಶವ ವಿಲೇವಾರಿಗೆ ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಮಗ!

ABOUT THE AUTHOR

...view details