ಬಟಿಂಡಾ (ಪಂಜಾಬ್):ಬಟಿಂಡಾದ ಮೌರ್ ಮಂಡಿ ಪಟ್ಟಣದ ಬಳಿಯ, ಆಪ್ ಶಾಸಕ ಸುಖಬೀರ್ ಸಿಂಗ್ ಮೈಸರ್ಖಾನ ಅವರ ಹುಟ್ಟೂರಾದ ಮೈಸರಖಾನಾ ಗ್ರಾಮದ ಪುರಾತನ ದೇವಾಲಯದ ಗೋಡೆಗಳ ಮೇಲೆ ಕರ್ನಾಟಕ ಪ್ರತ್ಯೇಕತಾವಾದಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಿರುವ ಘಟನೆ ನಡೆದಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್, ಗೋಡೆಗಳನ್ನು ವಿರೂಪಗೊಳಿಸಿರುವ ವಿಡಿಯೋ ಚಿತ್ರೀಕರಣ ಮತ್ತು ಬಿಡುಗಡೆ ಮಾಡಿರುವ ಹೊಣೆ ಹೊತ್ತಿದೆ.
ಕಳೆದ ವರ್ಷ ಪಂಜಾಬ್ ಪೊಲೀಸರು ಸಂಗೂರಿನ ಕಾಳಿ ದೇವಿ ದೇವಸ್ಥಾನದ ಗೋಡೆಯ ಮೇಲೆ ಇದೇ ರೀತಿ ಖಲಿಸ್ತಾನ್ ಘೋಷಣೆಗಳನ್ನು ಬರೆದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿತ್ತು. ಆ ಘಟನೆ ಜೂನ್ನಲ್ಲಿ ಸಂಗ್ರೂರ್‌ನಲ್ಲಿ ನಡೆಯಲಿದ್ದ ಸಂಸತ್ತಿನ ಉಪಚುನಾವಣೆಗೆ ಮುನ್ನ, ಅಂದರೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಂಸತ್ ಕ್ಷೇತ್ರಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು ಜರುಗಿತ್ತು.
ಮಾರ್ಚ್‌ನಲ್ಲಿ ಬ್ರಿಸ್ಬೇನ್‌ನ ಪ್ರಮುಖ ಹಿಂದೂ ದೇವಾಲಯದ ಮೇಲೆ ಖಾಲಿಸ್ತಾನ್ ಪರ ಬೆಂಬಲಿಗರು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದರು. ಕಳೆದ ಎರಡು ತಿಂಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯ ನಾಲ್ಕನೇ ಘಟನೆ ಇದಾಗಿತ್ತು. ಜನವರಿ 23 ರಂದು, ಮೆಲ್ಬೋರ್ನ್‌ನ ಆಲ್ಬರ್ಟ್ ಪಾರ್ಕ್‌ನಲ್ಲಿರುವ ಇಸ್ಕಾನ್ ದೇವಾಲಯದ ಗೋಡೆಗಳ ಮೇಲೆ ಹಿಂದೂಸ್ತಾನ್ ಮುರ್ದಾಬಾದ್ ಎಂದು ಗೀಚಿ ವಿರೂಪಗೊಳಿದ್ದರು. ಜನವರಿ 16 ರಂದು, ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯದ ಮೇಲೂ ದಾಳಿ ನಡೆಸಲಾಗಿತ್ತು. ಜನವರಿ 12 ರಂದು, ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಭಾರತ ವಿರೋಧಿ ಬರಹದಿಂದ ವಿರೂಪಗೊಳಿಸಲಾಗಿತ್ತು.