ಹರಿದ್ವಾರ (ಉತ್ತರಾಖಂಡ): ಹರಿದ್ವಾರದ ಹರ್ ಕಿ ಪೌರಿಯಲ್ಲಿ ಇಂದು ಮಧ್ಯಾಹ್ನ ಶತಮಾನಗಳಷ್ಟು ಹಳೆಯದಾದ ಪ್ರಾಚೀನ ಮೆಟ್ಟಿಲುಗಳು ಪತ್ತೆಯಾಗಿವೆ.
ಮುಂದಿನ ವರ್ಷ (2021) ಹರಿದ್ವಾರದಲ್ಲಿ ಕುಂಭಮೇಳ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದ್ದು ಈ ಹಿನ್ನೆಲೆ ಹರ್ ಕಿ ಪೌರಿಯಲ್ಲಿ ಜೀರ್ಣೋದ್ಧಾರ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನವೀಕರಣ ಮಾಡುತ್ತಿದ್ದ ವೇಳೆ ಶತಮಾನಗಳಷ್ಟು ಹಳೆಯದಾದ ಪ್ರಾಚೀನ ಮೆಟ್ಟಿಲುಗಳು ಪತ್ತೆಯಾಗಿವೆ. ಮೆಟ್ಟಿಲುಗಳಲ್ಲಿ ಪ್ರಾಚೀನ ಭಾಷೆಯ ಲಿಪಿಗಳನ್ನು ಕೆತ್ತಲಾಗಿದ್ದು ಅಪರೂಪದ ಈ ಪ್ರಾಚೀನ ಮೆಟ್ಟಿಲುಗಳನ್ನು ನೋಡಿ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ನಗರಿಯಲ್ಲಿ ಮುಂದಿನ ವರ್ಷ ಪ್ರಾರಂಭವಾಗಲಿರುವ ಕುಂಭಮೇಳಕ್ಕೆ ಹಲವು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಕೊರೊನಾ ಹಿನ್ನೆಲೆ ಈ ಸಿದ್ಧತೆ ನಿಧಾನಗತಿ ಪಡೆದಿದ್ದು ಹರ್ ಕಿ ಪೌರಿಯಲ್ಲಿ ಇಂದು ಜೀರ್ಣೋದ್ಧಾರ ಕಾಮಗಾರಿಗಳನ್ನು ನಡೆಸುತ್ತಿದ್ದಾಗ ಈ ಪ್ರಾಚೀನ ಮೆಟ್ಟಿಲು ಪತ್ತೆಯಾಗಿವೆ.