ಕರ್ನಾಟಕ

karnataka

ETV Bharat / bharat

4 ದಶಕಗಳ ಹಿಂದೆ ಕಳುವಾಗಿದ್ದ ಭಾರತದ ಪ್ರಾಚೀನ ಶಿಲ್ಪ ಬೆಲ್ಜಿಯಂನಲ್ಲಿ ಪತ್ತೆ, ಶೀಘ್ರವೇ ಸ್ವದೇಶಕ್ಕೆ - ಇಂಡಿಯಾ ಪ್ರೈಡ್ ಪ್ರಾಜೆಕ್ಟ್

ಆಂಧ್ರಪ್ರದೇಶದ ನಾಗಾರ್ಜುನಕೊಂಡದಲ್ಲಿರುವ ವಸ್ತು ಸಂಗ್ರಹಾಲಯದಿಂದ ಕಳುವಾದ ಶಿಲ್ಪ ಇದಾಗಿದೆ. 1995ರಲ್ಲಿ ಈ ಕಲಾಕೃತಿಯ ಚಿತ್ರವನ್ನು ಕೊನೆಯ ಬಾರಿಗೆ ಇತಿಹಾಸಕಾರರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ನಂತರ 2018ರಲ್ಲಿ ಈ ಕಲಾಕೃತಿಯನ್ನು ಬೆಲ್ಜಿಯಂ ಏಷ್ಯನ್ ಆರ್ಟ್ ಟ್ರೇಡ್ ಮಾರಾಟಕ್ಕೆ ಇಟ್ಟಿತ್ತು.

ancient sculpture
ancient sculpture

By

Published : Mar 23, 2022, 6:35 PM IST

ಲಂಡನ್​: ಭಾರತದ ವಸ್ತು ಸಂಗ್ರಹಾಲಯದಿಂದ ಕಳುವಾಗಿದ್ದ ಪ್ರಾಚೀನ ಶಿಲ್ಪವೊಂದು ನಾಲ್ಕು ದಶಕಗಳ ಬಳಿಕ ಮರಳಿ ಸ್ವದೇಶಕ್ಕೆ ಬರುತ್ತಿದೆ. 1990ರ ದಶಕದಲ್ಲಿ ಆಂಧ್ರಪ್ರದೇಶದ ನಾಗಾರ್ಜುನಕೊಂಡದಲ್ಲಿರುವ ಅಪರೂಪದ ಶಿಲ್ಪ ಕಳ್ಳತನವಾಗಿತ್ತು. ಇದೀಗ ಬೆಲ್ಜಿಯಂನಲ್ಲಿ ಆ ಶಿಲ್ಪ ಸಿಕ್ಕಿದ್ದು, ಬ್ರಸೆಲ್ಸ್​ನಲ್ಲಿರುವ ಭಾರತೀಯ ಹೈಕಮಿಷನರ್​ ಸಂತೋಷ ಜಾ ಅವರಿಗೆ ಹಸ್ತಾಂತರಿಸಲಾಗಿದೆ.

ನಾಗಾರ್ಜುನಕೊಂಡದ ಹೆಸರಿಡದ ವಸ್ತು ಸಂಗ್ರಹಾಲಯದಿಂದ ಕಳುವಾದ ಶಿಲ್ಪ ಇದಾಗಿದೆ. ಗೌತಮ ಬುದ್ಧ ಜೀವನದಲ್ಲಿ ನಡೆದ ಘಟನೆಗಳನ್ನು ವಿವರಿಸುವ ಶಿಲ್ಪವಿದು. ಆಸ್ಥಾನದಲ್ಲಿನ ವಿಚಾರಣೆಯ ಸಂದರ್ಭವನ್ನು ಇದರಲ್ಲಿ ಬಿಂಬಿಸಲಾಗಿದೆ. ರಾಜ ದಂಪತಿ ಸಿಂಹಾಸನದಲ್ಲಿ ಕುಳಿತಿರುವ ಮತ್ತು ಸೇವಕರು ನಿಂತಿರುವಂತೆ ಮನೋಜ್ಞವಾಗಿ ಚಿತ್ರಿಸಲಾಗಿದೆ. ಇದರ ಜತೆಗೆ, ಓರ್ವ ಮಹಿಳೆ ಮತ್ತು ಮಗು ಕಲಾಕೃತಿಯಲ್ಲಿ ಕಾಣಿಸುತ್ತಾರೆ.

1995ರಲ್ಲಿ ಈ ಕಲಾಕೃತಿಯ ಚಿತ್ರವನ್ನು ಕೊನೆಯ ಬಾರಿಗೆ ಇತಿಹಾಸಕಾರರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ನಂತರ 2018ರಲ್ಲಿ ಈ ಕಲಾಕೃತಿಯನ್ನು ಬೆಲ್ಜಿಯಂ ಏಷ್ಯನ್ ಆರ್ಟ್ ಟ್ರೇಡ್ ಮಾರಾಟಕ್ಕೆ ಇಟ್ಟಿತ್ತು. ಅಲ್ಲಿಂದ ಎರಡು ವರ್ಷಗಳ ಕಾಲ ಸತತ ಪ್ರಯತ್ನದ ಬಳಿಕ ಈ ಶಿಲ್ಪವನ್ನು ಮರಳಿ ಪಡೆಯಲಾಗಿದೆ. ಐಪಿಪಿ (ಇಂಡಿಯಾ ಪ್ರೈಡ್ ಪ್ರಾಜೆಕ್ಟ್) ಮತ್ತು ಎಆರ್‌ಐ (ಆರ್ಟ್ ರಿಕವರಿ ಇಂಟರ್‌ನ್ಯಾಶನಲ್) ಎರಡು ಸಂಸ್ಥೆಗಳ ನೆರವಿನಿಂದ ಭಾರತಕ್ಕೆ ಕಲಾಕೃತಿ ಬರುತ್ತಿದೆ.

ಇನ್ನು, ಕಳುವಾದ ಐತಿಹಾಸಿಕ ಕಲಾಕೃತಿಗಳ ಪತ್ತೆ ಹಚ್ಚುವ ಕಾರ್ಯದಲ್ಲಿ ಎಆರ್‌ಐ ಸಂಸ್ಥೆ ತೊಡಗಿದ್ದು, ಭಾರತದ ಈ ಶಿಲ್ಪವನ್ನು ಹೈಕಮಿಷನರ್​ ಸಂತೋಷ ಜಾ ಅವರಿಗೆ ಹಸ್ತಾಂತರ ಮಾಡಿದೆ. ಇದೇ ಜನವರಿಯಲ್ಲಿ ಇಂತಹದ್ದೇ ಮಹತ್ವದ ಪ್ರಾಚೀನ ಶಿಲ್ಪವನ್ನು ಪತ್ತೆ ಹಚ್ಚಲಾಗಿತ್ತು. ಉತ್ತರ ಪ್ರದೇಶದಲ್ಲಿ 40 ವರ್ಷಗಳ ಹಿಂದೆ ಕಳುವಾಗಿದ್ದ ವಿಗ್ರಹ ಲಂಡನ್​ನಲ್ಲಿ ದೊರೆತಿತ್ತು.

ಇದನ್ನೂ ಓದಿ:ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳು: ಪರಿಶೀಲಿಸಿದ ಪಿಎಂ ಮೋದಿ

ABOUT THE AUTHOR

...view details