ಅನನ್ಯ ಪಾಂಡೆ ಬಾಲಿವುಡ್ ನ ಉತ್ತಮ ನಟಿಯರಲ್ಲಿ ಒಬ್ಬರು. ಸದಾ ಕಾಲ ಲವಲವಿಕೆಯಿಂದ ಇರುವ ಮೂಲಕ ಎಲ್ಲರಿಗೂ ಅಚ್ಚುಮೆಚ್ಚು. ಸದ್ಯ ಅನನ್ಯ ಇತ್ತೀಚಿಗೆ ತೆರೆಕಂಡ ಗೇಹ್ರಯಾನ್ ಸಿನೆಮಾದ ಯಶಸ್ಸಿನಿಂದ ಹರ್ಷಿತರಾಗಿದ್ದಾರೆ. ಅಲ್ಲದೇ ದಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್ ಗೆ ಅನನ್ಯ ಪಾಂಡೆ ಜೊತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ದಬೂ ರತ್ನಾನಿ ಅವರ ಜೊತೆಗಿನ ಫೋಟೋಶೂಟ್ನ ಅನುಭವವನ್ನು ಹಂಚಿಕೊಂಡಿರುವ ನಟಿ ಅನನ್ಯಾ ಪಾಂಡೆ, ಇವರ ಜೊತೆ ಕೆಲಸ ಮಾಡಿರುವುದಕ್ಕೆ ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ನನ್ನ ಮೂರನೇಯ ಫೋಟೋಶೂಟ್ ಆಗಿದ್ದು, ತುಂಬಾ ಎಕ್ಸೈಟ್ ಮೆಂಟ್ ಆಗಿರುವುದಾಗಿ ಹೇಳಿದ್ದಾರೆ.