ಕರ್ನಾಟಕ

karnataka

ETV Bharat / bharat

ಗಿಡಮೂಲಿಕೆ ವೈದ್ಯ ಆನಂದಯ್ಯರ ಕೊರೊನಾ ಔಷಧಿ ವಿತರಣೆ ತಾತ್ಕಾಲಿಕ ಸ್ಥಗಿತ - ಐಸಿಎಂಆರ್

ಗಿಡಮೂಲಿಕೆ ವೈದ್ಯ ಆನಂದಯ್ಯರ ಕೊರೊನಾ ಆಯುರ್ವೇದ ಔಷಧಿ ವಿತರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ವೈಜ್ಞಾನಿಕವಾಗಿ ಸಾಬೀತಾಗುವ ತನಕ ನೀಡಬಾರದು ಎಂದು ತಿಳಿಸಲಾಗಿದೆ.

anandaiahs corona medicine distribution is stopped today
anandaiahs corona medicine distribution is stopped today

By

Published : May 22, 2021, 10:34 PM IST

ಆಂಧ್ರ ಪ್ರದೇಶ: ರಾಜ್ಯ ಸರ್ಕಾರವು ವಿಧಿಸಿರುವ ನಿರ್ಬಂಧಗಳಿಂದಾಗಿ ಗಿಡಮೂಲಿಕೆ ವೈದ್ಯರಾಗಿರುವ ಆನಂದಯ್ಯರ ಆಯುರ್ವೇದ ಔಷಧಿಯನ್ನು ಇಂದು ಕೊರೊನಾ ಸೋಂಕಿತರಿಗೆ ವಿತರಿಸಲಾಗಿಲ್ಲ.

ನೆಲ್ಲೂರಿನ ಕೃಷ್ಣಪಟ್ಟಣಂನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಔಷಧಿ ಪಡೆಯಲು ಧಾವಿಸುತ್ತಿದ್ದು, ಸ್ಥಳಕ್ಕೆ ಆಯುಷ್ ತಂಡವು ಭೇಟಿ ನೀಡಿದೆ. ತಂಡವು ಔಷಧಿಯ ಕೆಲವು ಮಾದರಿಗಳನ್ನು ಸಂಗ್ರಹಿಸಿ, ಗಿಡಮೂಲಿಕೆ ವೈದ್ಯ ಆನಂದಯ್ಯರ ಅವರು ಈಗಾಗಲೇ ನೀಡಿರುವ ಔಷಧಿಯನ್ನು ಬಳಸಿದ ಸ್ಥಳೀಯ ಜನರನ್ನು ವಿಚಾರಿಸಿದ್ದಾರೆ.

ವಿವಿಧ ರಾಜ್ಯಗಳಿಂದ ರೋಗಿಗಳಿಂದ ಇವರ ಔಷಧಕ್ಕೆ ಭಾರೀ ಬೇಡಿಕೆ ಇರುವುದರಿಂದ ನೆಲ್ಲೂರಿನ ಗಿಡಮೂಲಿಕೆ ವೈದ್ಯರಿಗೆ ಹೆಚ್ಚಿನ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಸ್ಥಳೀಯ ಶಾಸಕ ಕಾಕನಿ ಗೋವರ್ಧನ್ ರೆಡ್ಡಿ, ಔಷಧಿ ಪೂರೈಕೆಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಜನ ವಿಜ್ಞಾನ ವೇದಿಕೆಯು ಆನಂದಯ್ಯರ ಔಷಧಿಯ ಪರಿಣಾಮಕಾರಿತ್ವ ವೈಜ್ಞಾನಿಕವಾಗಿ ಸಾಬೀತಾಗುವ ಔಷಧಿ ನೀಡಬಾರದು ಎಂದು ಹೇಳಿದೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಔಷಧಿ ಪರಿಣಾಮಕಾರಿತ್ವದ ಶೀಘ್ರ ಪತ್ತೆಹಚ್ಚುವಂತೆ ಆಯುಷ್‌ನ ಇನ್‌ಚಾರ್ಜ್ ಮಂತ್ರಿ ಮತ್ತು ಐಸಿಎಂಆರ್ ಮುಖ್ಯಸ್ಥರನ್ನು ವಿನಂತಿಸಿದ್ದಾರೆ.

ABOUT THE AUTHOR

...view details