ಹೈದರಾಬಾದ್:ಸದಾ ಒಂದಿಲ್ಲೊಂದು ವಿಭಿನ್ನ ವಿಡಿಯೋ, ಫೋಟೋ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಉದ್ಯಮಿ ಆನಂದ್ ಮಹಿಂದ್ರಾ, ಇದೀಗ ಮತ್ತೊಂದು ವಿಶೇಷ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಒಂದೇ ಕುಟುಂಬದ ಐದು ತಲೆಮಾರಿನ ಜನರು ಒಟ್ಟಿಗಿದ್ದಾರೆ.
ಇದನ್ನೂ ಓದಿ:ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆ... ಲವರ್ ಮೇಲೆ ಕುಟುಂಬದ ಆರೋಪ
20 ಸೆಕೆಂಡ್ಗಳ ವಿಡಿಯೋ ಮೊದಲಿಗೆ ಚಿಕ್ಕ ಮಗುವಿನಿಂದ ಆರಂಭವಾಗಿದೆ. ತದನಂತರ ನಾಲ್ಕು ತಲೆಮಾರಿನ ವ್ಯಕ್ತಿಗಳು ಒಬ್ಬೊಬ್ಬರಾಗಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ. 'ಒಟ್ಟಿಗೆ ಐದು ತಲೆಮಾರು. ಪ್ರಪಂಚದಲ್ಲಿ ಇಂತಹ ಕುಟುಂಬಗಳು ಎಷ್ಟಿವೆ? ಭಾರತದಲ್ಲೂ ಇಂತಹ ಕುಟುಂಬ ನೋಡಲು ನಾನು ಬಯಸುತ್ತೇನೆ' ಮಹಿಂದ್ರಾ ಬರೆದಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ಭಾರತದಲ್ಲೂ ಅನೇಕ ತಲೆಮಾರುಗಳು ಒಟ್ಟಿಗೆ ವಾಸವಾಗಿದ್ದವು. ಆದರೆ, ಕೈಗಾರಿಕೀಕರಣದಿಂದಾಗಿ ಇದೀಗ ಕುಟುಂಬಗಳು ಬೇರೆ ಬೇರೆಡೆ ವಾಸವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅನೇಕರು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಆದರೆ, ಭಾರತದ ಕೆಲವು ಹಳ್ಳಿಗಳಲ್ಲಿ ಈ ಪರಿಕಲ್ಪನೆ ಇಂದಿಗೂ ಕಾಣಸಿಗುತ್ತದೆ ಎಂದಿದ್ದಾರೆ.