ಕರ್ನಾಟಕ

karnataka

ETV Bharat / bharat

ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡ ಬಾಲ್ಯದ ಚಿತ್ರ ಹಂಚಿಕೊಂಡ ಆನಂದ್‌ ಮಹೀಂದ್ರಾ - ಈಟಿವಿ ಭಾರತ ಕರ್ನಾಟಕ

ರಕ್ಷಾ ಬಂಧನದ ಅಂಗವಾಗಿ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಹೋದರಿ ಹಾಗೂ ತಾಯಿ ಜೊತೆ ಇರುವ ಹಳೆಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

Anand Mahindra
Anand Mahindra

By

Published : Aug 11, 2022, 5:21 PM IST

ಸಹೋದರ-ಸಹೋದರಿಯರ ಪ್ರೀತಿ ಪ್ರತೀಕವಾದ ರಕ್ಷಾ ಬಂಧನ ಆಚರಣೆಯ ಸಂಭ್ರಮ ದೇಶಾದ್ಯಂತ ಮನೆಮಾಡಿದೆ. ಅಣ್ಣ-ತಂಗಿಯ ಭ್ರಾತೃತ್ವದ ಸಂಕೇತವೇ ಈ ರಾಖಿ. ಈ ಸಂದರ್ಭದಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಕೂಡಾ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿದ್ದು, ಸಹೋದರಿ ಮತ್ತು ತಾಯಿಯೊಂದಿಗಿನ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ.

ದೆಹಲಿಯ ತಮ್ಮ ನಿವಾಸದಲ್ಲಿ ಸಹೋದರಿ ರಾಧಿಕಾ ಅವರಿಂದ ರಾಖಿ ಕಟ್ಟಿಸಿಕೊಳ್ಳುತ್ತಿರುವ ಫೋಟೋ ಇದಾಗಿದೆ. ತಾಯಿ ಇಂದಿರಾ ಮಹೀಂದ್ರಾ ಕೂಡ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಇವರ ತಂಗಿ ಅನುಜಾ ಸದ್ಯ ಕರ್ನಾಟಕದ ಕೊಡಗಿನಲ್ಲಿದ್ದು, ಅವರು ಕಳುಹಿಸಿರುವ ರಾಖಿ ಸಮಯಕ್ಕೆ ಸರಿಯಾಗಿ ಬಂದಿದೆ. ಸಹೋದರಿಯ ಹಾರೈಕೆಗಳು ಸದಾ ನನ್ನೊಂದಿಗೆ ಇರುತ್ತವೆ ಎಂದಿದ್ದಾರೆ.

ಸಹೋದರಿ ನೀಡಿದ ಗಿಫ್ಟ್ ಮೆಲುಕು ಹಾಕಿದ ಸಚಿನ್​: ರಕ್ಷಾ ಬಂಧನದ ಸಂಭ್ರಮದಲ್ಲಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ ಕೂಡ ತಮ್ಮ ಸಹೋದರಿ ನೀಡಿರುವ ಗಿಫ್ಟ್​​ ಸ್ಮರಿಸಿ, ಟ್ವೀಟ್ ಮಾಡಿದ್ದಾರೆ. ಚಿಕ್ಕವರಾಗಿದಾಗ ತಾವು ಕ್ರಿಕೆಟ್ ಅಭ್ಯಾಸ ಮಾಡ್ತಿದ್ದಾಗ ಸವಿತಾ ನೀಡಿದ್ದ ಬ್ಯಾಟ್​​ ಯಾವಾಗಲೂ ನನಗೆ ವಿಶೇಷವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ. ಸಹೋದರರಾದ ನಿತೀನ್ ಹಾಗೂ ಅಜಿತ್​ ಜೊತೆಗಿನ ಫೋಟೋ ಕೂಡಾ ಶೇರ್ ಮಾಡಿದ್ದಾರೆ.

ಇದನ್ನೂ ಓದಿ:ನಟ ಯಶ್‌​ ಮನೆಯಲ್ಲಿ ರಕ್ಷಾ ಬಂಧನ ಸಂಭ್ರಮ: ಫೋಟೋಗಳನ್ನು ನೋಡಿ

ABOUT THE AUTHOR

...view details