ಉದ್ಯಮಿ ಆನಂದ್ ಮಹೀಂದ್ರಾ ಅವರು ಕಲರ್ಸ್ ಆಫ್ ಭಾರತ್ (Colours of Bharat) ಎಂಬ ಟ್ವಿಟರ್ ಪೇಜ್ ಪೋಸ್ಟ್ ಅನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಭಾರತದ 10 ಅತ್ಯಂತ ಸುಂದರವಾದ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ. ಹಿಮಾಚಲ ಪ್ರದೇಶದ ಕಲ್ಪಾ ಹಳ್ಳಿಯಿಂದ ಮೇಘಾಲಯದ ಮಾವ್ಲಿನ್ನಾಂಗ್‌ವರೆಗಿನ (Mawlynnong) ಹಳ್ಳಿಗಳ ಚಿತ್ರಗಳು ಈ ಲಿಸ್ಟ್ನಲ್ಲಿದೆ.
ನೀವು ಕೇವಲ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ಮಾತ್ರವಲ್ಲದೇ, ಪ್ರಯಾಣಿಸಲು ಇಷ್ಟ ಪಡುವವರಾಗಿದ್ದರೆ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಇತ್ತೀಚಿನ ಪೋಸ್ಟ್ ಖಂಡಿತವಾಗಿಯೂ ನಿಮ್ಮನ್ನು ಆಕರ್ಷಿಸುತ್ತವೆ. ಆನಂದ್ ಮಹೀಂದ್ರಾ ಈವರೆಗೆ ಹೆಚ್ಚು ಅನ್ವೇಷಿಸದ ಸ್ಥಳಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿ ಆಗಿದ್ದಾರೆ. ಅವರ ಇತ್ತೀಚಿನ ಟ್ವಿಟರ್ ಪೋಸ್ಟ್ ಇದಕ್ಕೆ ಅತ್ಯುತ್ತಮ ಉದಾಹರಣೆ.
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು 'ಕಲರ್ಸ್ ಆಫ್ ಭಾರತ್' ಎಂಬ ಟ್ವಿಟರ್ ಪುಟದ ಪೋಸ್ಟ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಭಾರತದ 10 ಅತ್ಯಂತ ಸುಂದರವಾದ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ.
ಆನಂದ್ ಮಹೀಂದ್ರಾ ಅವರ ಪೋಸ್ಟ್ 483kಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಅತಿ ಹೆಚ್ಚು ಪ್ರತಿಕ್ರಿಯೆಗಳನ್ನು ಗಳಿಸಿದೆ. ಭಾರತೀಯ ಹಳ್ಳಿಗಳು ನೀಡುವ ಸೌಂದರ್ಯದಿಂದ ಜನರು ಮಂತ್ರಮುಗ್ಧರಾಗಿದ್ದಾರೆ. ಈ ಪೋಸ್ಟ್ನಲ್ಲಿರುವ ಪ್ರತೀ ಫೋಟೋಗಳು ಬಹಳ ಸುಂದರವಾಗಿದ್ದು, ಪ್ರಾಕೃತಿಕ ಸೌಂದರ್ಯ ನಿಜಕ್ಕೂ ಮನಮೋಹಕವಾಗಿದೆ.
ಇದರಲ್ಲಿ ಭಾರತದ ನೈಜ ಸೌಂದರ್ಯ ಅಡಗಿದೆ. ಇಂತಹ ಅನ್ವೇಷಿಸದ ಸ್ಥಳಗಳು ನಮ್ಮ ದೇಶದ ವೈವಿಧ್ಯತೆಯ ಪರಿಪೂರ್ಣ ಸಂಕೇತವಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಆ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಸವಿಯಲು ಇಷ್ಟಪಡುವುದಾಗಿ ತಿಳಿಸಿದರು. ಆನಂದ್ ಮಹೀಂದ್ರಾ ಅವರ ಈ ಪೋಸ್ಟ್ ಅನ್ನು ನೆಟ್ಟಿಗರು ಇಷ್ಟ ಪಟ್ಟು ತಮ್ಮ ಖಾತೆಗಳಲ್ಲೂ ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ:Photos: ಪ್ರಕೃತಿ ನಡುವೆ ತನ್ನ ಸೌಂದರ್ಯ ಸಿರಿ ಪ್ರದರ್ಶಿಸಿದ ಜಾನ್ವಿ ಕಪೂರ್
10 ಸುಂದರ ಹಳ್ಳಿಗಳು:
1. ಕಲ್ಪಾ (Kalpa), ಹಿಮಾಚಲ ಪ್ರದೇಶ.
2. ಮಾವ್ಲಿನ್ನಾಂಗ್ (Mawlynnong), ಮೇಘಾಲಯವು ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮವಾಗಿದೆ - ಇದನ್ನು 'ದೇವರ ಸ್ವಂತ ಉದ್ಯಾನ' ಎಂದು ಕರೆಯಲಾಗುತ್ತದೆ.