ನವದೆಹಲಿ: 15 ಆಗಸ್ಟ್ 2022 ರಂದು ಭಾರತದ ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಳ್ಳುತ್ತಿವೆ. ಈ ಸಂದರ್ಭದಲ್ಲಿ ಭಾರತ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನವನ್ನು ಆರಂಭಿಸಿದ್ದು, ಇದರ ಅಡಿಯಲ್ಲಿ ಸಾಮಾನ್ಯ ಭಾರತೀಯರೂ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನಿಟ್ಟು ದೇಶಭಕ್ತಿ ಬೆಳಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ತ್ರಿವರ್ಣ ಧ್ವಜವನ್ನು ಅನ್ವಯಿಸುವಲ್ಲಿ ಸೆಲೆಬ್ರಿಟಿಗಳು ಸಹ ಹಿಂದೆ ಸರಿದಿಲ್ಲ. ಇತ್ತೀಚೆಗೆ ವಯಸ್ಸಾದ ದಂಪತಿ ತಮ್ಮ ಮನೆಯ ಛಾವಣಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಆ ದಂಪತಿಯ ಕಾರ್ಯಕ್ಕೆ ಮನಸೋತ್ತಿದ್ದಾರೆ. ಅವರನ್ನು ಶ್ಲಾಘಿಸುತ್ತಲೇ ಜನರಿಗೆ ದೊಡ್ಡ ಪಾಠ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಬಗ್ಗೆ ಇಷ್ಟೊಂದು ಅಬ್ಬರವೇಕೆ ಎಂದು ನೀವು ಆಶ್ಚರ್ಯಪಡುತ್ತಿದ್ದರೆ ಈ ದಂಪತಿ ಹತ್ತಿರ ಉತ್ತರ ಕೇಳಿ. ಇವರಿಬ್ಬರು ನಿಮಗೆ ಯಾವುದೇ ಉಪನ್ಯಾಸಕ್ಕಿಂತ ಉತ್ತಮವಾಗಿ ವಿವರಿಸುತ್ತಾರೆ. ಜೈ ಹಿಂದ್ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ವಯಸ್ಸಾದ ದಂಪತಿಗಳು ಕಾಣಿಸಿಕೊಂಡಿದ್ದಾರೆ. ಇಬ್ಬರೂ ಟೆರೇಸ್ ಮೇಲೆ ನಿಂತಿದ್ದಾರೆ. ವಯಸ್ಸಾದ ಮಹಿಳೆ ಕಬ್ಬಿಣದ ಡ್ರಮ್ ಮೇಲೆ ಹತ್ತುವುದು ಮತ್ತು ಕಬ್ಬಿಣದ ರಾಡ್ಗೆ ಧ್ವಜವನ್ನು ಹಾಕುವುದು ಕಂಡುಬರುತ್ತದೆ. ಕೆಳಗೆ ಅವರ ಪತಿ ತನ್ನ ಪತ್ನಿಯ ರಕ್ಷಣೆಗಾಗಿ ಡ್ರಮ್ ಹಿಡಿದು ನಿಂತಿದ್ದಾರೆ. ಫೋಟೋದಲ್ಲಿ ವಯಸ್ಸಾಗಿದ್ದರೂ ಸಹ ಅವರ ಧ್ವಜ ಮತ್ತು ದೇಶದ ಪ್ರೀತಿ ಕಾಣುತ್ತಿದೆ. ಈ ಫೋಟೋ ಲಕ್ಷಾಂತರ ಜನರ ವೀಕ್ಷಣೆಯಾಗಿದ್ದು, ಸರಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ.
ಓದಿ:ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ!