ಮುಂಬೈ:ಸದಾ ಒಂದಿಲ್ಲೊಂದು ವಿಭಿನ್ನ ರೀತಿಯ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸಕ್ರಿಯರಾಗಿರುವ ಮಹೇಂದ್ರ ಆಂಡ್ ಮಹೀಂದ್ರ ಕಂಪನಿ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರ ಇದೀಗ ಮತ್ತೊಂದು ವಿಭಿನ್ನವಾದ ವಿಡಿಯೋ ಹಂಚಿಕೊಂಡಿದ್ದಾರೆ.
ಬೈಕ್ ಸವಾರನೊಬ್ಬ ಪಲ್ಸರ್ ಬೈಕ್ನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಹೊರಟಿರುವ ವಿಡಿಯೋ ಇದಾಗಿದ್ದು, ರೈಡರ್ ಇಲ್ಲದೇ ಬೈಕ್ ಓಡಿಸುತ್ತಿರುವ ಕಾರಣ ಅದು ತನ್ನಷ್ಟಕ್ಕೆ ತಾನೇ ಹೋಗುತ್ತಿದೆ. ಹೀಗಾಗಿ ಅನೇಕರು ಇದು ಭಾರತದ 'ಡ್ರೈವರ್ಲೆಸ್ ಬೈಕ್' ಎಂದು ಕರೆದಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರ, ಅಮೆರಿಕದ ಟೆಸ್ಲಾ ಕಂಪನಿ ವಾಹನಕ್ಕೆ ಪೈಪೋಟಿ ನೀಡಬಹುದಾದ ಭಾರತದ ದೇಸಿ ಡ್ರೈವರ್ಲೆಸ್ ಬೈಕ್ ಇದಾಗಿದೆ ಎಂದಿದ್ದಾರೆ. ಜೊತೆಗೆ ಹಿಂದಿ ಹಾಡಿನ ಕೆಲ ಸಾಲು ಬರೆದುಕೊಂಡಿದ್ದಾರೆ.