ಮುಂಬೈ: ಸದಾ ಒಂದಿಲ್ಲೊಂದು ವಿಭಿನ್ನ ವಿಚಾರ ಹಾಗೂ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಉದ್ಯಮಿ ಆನಂದ್ ಮಹೀಂದ್ರ ಇದೀಗ ಮತ್ತೊಂದು ವಿಷಯಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಕೈ - ಕಾಲು ಇಲ್ಲದ ಶ್ರಮಜೀವಿಯ ವಿಡಿಯೋ ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿರುವ ಅವರು ಆತನಿಗೆ ಕೆಲಸದ ಆಫರ್ ಸಹ ನೀಡಿದ್ದಾರೆ.
ಏನಿದು ಸ್ಟೋರಿ?
ವಿಶೇಷ ಚೇತನ ವ್ಯಕ್ತಿಯೋರ್ವ ಮನೆಯ ಜವಾಬ್ದಾರಿ ಹೊತ್ತುಕೊಂಡು ವಿಭಿನ್ನವಾಗಿ ವಿನ್ಯಾಸ ಮಾಡಿರುವ ಬೈಕ್ ಸಹಾಯದಿಂದ ಕೂಲಿ ಕೆಲಸ ಮಾಡುತ್ತಾನೆ. ಅದರಿಂದ ಬರುವ ಹಣದಿಂದ ಹೆಂಡತಿ, ಇಬ್ಬರು ಮಕ್ಕಳು ಹಾಗೂ ವಯಸ್ಸಾದ ತಂದೆಯನ್ನ ನೋಡಿಕೊಳ್ಳುತ್ತಿದ್ದಾರೆ. ಕೆಲ ದಾರಿಹೋಕರು ಈತನ ಪ್ರಶ್ನೆಗೊಳಪಡಿಸಿದಾಗ ತನ್ನ ಸ್ಟೋರಿ ಹೇಳಿಕೊಂಡಿದ್ದಾನೆ. ಜೊತೆಗೆ ತಾನು ಯಾವ ರೀತಿಯಾಗಿ ವಾಹನ ತಯಾರು ಮಾಡಿದ್ದಾರೆಂಬುದನ್ನ ತಿಳಿಸಿದ್ದು, ಕೆಲ ದೂರು ರೈಡ್ ಮಾಡಿ ತೋರಿಸಿದ್ದಾರೆ.
ಇದರ ವಿಡಿಯೋ ತುಣುಕೊಂದನ್ನ ಉದ್ಯಮಿ ಆನಂದ್ ಮಹೀಂದ್ರ ತಮ್ಮ ಟ್ವಿಟರ್ ನಲ್ಲಿ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಯಾರು ಎಂಬುದು ನನಗೆ ತಿಳಿದಿಲ್ಲ. ಎಷ್ಟು ಹಳೆಯ ವಿಡಿಯೋ ಎಂಬುದು ಸಹ ಗೊತ್ತಿಲ್ಲ. ಆದರೆ, ಈ ವ್ಯಕ್ತಿಯ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಮಹೀಂದ್ರ ಲಾಜಿಸ್ಟಿಕ್ ಸಂಸ್ಥೆಯಲ್ಲಿ ಬ್ಯುಸಿನೆಸ್ ಅಸೋಸಿಯೇಟ್ ಮಾಡಿ ಎಂದು ಸೂಚನೆ ನೀಡಿದ್ದಾರೆ. ಈ ಮೂಲಕ ವಿಶೇಷ ಚೇತನ ವ್ಯಕ್ತಿಗೆ ಬಹುದೊಡ್ಡ ಉದ್ಯೋಗದ ಆಫರ್ ನೀಡಿದ್ದಾರೆ.
ಇದನ್ನೂ ಓದಿರಿ:₹257 ಕೋಟಿ, 23 ಕೆಜಿ ಚಿನ್ನದ ಒಡೆಯ.. ಹಳೇ ಸ್ಕೂಟರ್, ರಬ್ಬರ್ ಚಪ್ಪಲಿ ಧರಿಸುತ್ತಿದ್ದ ಪಿಯೂಷ್ ಜೈನ್!
ಸ್ಕೂಟರ್ನ್ನ ಸರಕು ವಾಹನದ ರೀತಿಯಾಗಿ ಪರಿವರ್ತನೆ ಮಾಡಿಕೊಂಡಿರುವ ವ್ಯಕ್ತಿ ಎಕ್ಸಲರೇಟ್ ಹಾಗೂ ಬ್ರೇಕ್ಗಳನ್ನ ತಮ್ಮ ಭುಜದ ಭಾಗದಿಂದ ನಿರ್ವಹಣೆ ಮಾಡುತ್ತಾರೆ. ಕಳೆದ ಐದು ವರ್ಷಗಳಿಂದಲೂ ಈ ವಾಹನದ ಮೂಲಕವೇ ಜೀವನ ನಡೆಸುತ್ತಿದ್ದು, ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಈತ ದೆಹಲಿಯ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಾನೆ ಎಂದು ಅನೇಕರು ತಿಳಿಸಿದ್ದಾರೆ. ಆನಂದ್ ಮಹೀಂದ್ರ ಅವರ ಕಣ್ಣಿಗೆ ಈ ವಿಡಿಯೋ ಕಾಣಸಿಗುತ್ತಿದ್ದಂತೆ ಕೆಲಸದ ಆಫರ್ ನೀಡಿದ್ದಾರೆ.