ನಮಕ್ಕಲ್ (ತಮಿಳುನಾಡು): ಹಣದ ಸಮಸ್ಯೆ ನಮ್ಮನ್ನು ಎಂತಹ ಸಮಸ್ಯೆಗೂ ತಂದಿಡಬಹುದು. ಹಾಗೇ ಇದೇ ಹಣದ ಸಮಸ್ಯೆ ಕುರಿತು ಆಲೋಚನೆ ಮಾಡಿದರೆ ಅದಕ್ಕೆ ಅಚ್ಚರಿ ರೂಪದಲ್ಲಿ ಪರಿಹಾರ ಸಹ ಕಂಡುಕೊಳ್ಳುಬಹುದು. ಹೇಗೆ ಅನ್ನೋದನ್ನು ಇಲ್ಲೊಬ್ಬ ಯುವಕ ಮಾಡಿ ತೋರಿಸಿದ್ದಾನೆ.
ವಾಹನದಲ್ಲಿ ತಯಾರಾದ ಚಿಕ್ಕ ಮನೆ ಈ ಯುವಕನ ಆಲೋಚನೆ ನಿಮಗೂ ಅಚ್ಚರಿ ತರಿಸಬಹುದು. ಮನೆ ಕಟ್ಟುವ ಕನಸು ಕಾಣುವ ಎಷ್ಟೋ ಬಡ ಜನರಿಗೆ ಇದು ಮಾದರಿ ಆದರೂ ಆದೀತು. ಸರಳ ಹಾಗೂ ವಿರಳವಾಗಿ ಕಾಣುವ ಈ ಮನೆ ನಿಂತ ನೀರಲ್ಲ, ಓಡಾಡುವ ಮನೆ. ಆಟೋದಲ್ಲಿ ಈ ಸುಸಜ್ಜಿತ ಮನೆ ನಿರ್ಮಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ:ಜೋಡೆತ್ತು, ಇಂಧನ ರಹಿತ ಕಾರಿಗೆ ರೈತನೇ ಸಾರಥಿ : ಮಹೀಂದ್ರಾ ಗಮನ ಸೆಳೆದ ವಿಡಿಯೋ
ಸಂಚಾರಿ ಶೌಚಾಲಯ, ಸಂಚಾರಿ ಡೀಸೆಲ್ ಬಂಕ್, ಸಂಚಾರಿ ಉಪಹಾರ ಕೇಂದ್ರ, ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ... ಹೀಗೆ ಹತ್ತಾರು ಅವಶ್ಯಕ ವಸ್ತುಗಳು ಈಗ ಸಂಚಾರಿಮಯವಾಗಿವೆ. ಈ ಸಾಲಿಗೆ ಈಗ ಸಂಚಾರಿ ಮನೆ ಕೂಡ ಒಂದಾಗಿದೆ. ಇದನ್ನು ಅಭಿವೃದ್ಧಿ ಮಾಡಿರುವ ರೀತಿಗೆ ಪ್ರಶಂಸೆ ವ್ಯಕ್ತಪಡಿಸಲೇಬೇಕು.
ಕ್ಯಾರವಾನ್(ವಾಹನ) ಹೊಂದಿರುವ ತಮಿಳುನಾಡಿನ ಎನ್.ಜಿ.ಅರುಣ್ ಪ್ರಭು ಎಂಬ ಯುವಕ ತನ್ನ ಆಟೋ ರಿಕ್ಷಾವನ್ನೇ ಸಂಚಾರಿ ವಾಹನವನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಮೂಲಕ ಈಗ ಗಮನ ಸೆಳೆದಿದ್ದಾನೆ. ಕೈಗೆಟುಕುವ ದರದಲ್ಲಿಯೇ ಖರ್ಚು ಮಾಡಿ ಈ ಸಂಚಾರಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಇಲ್ಲಿ ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.
ಕೇವಲ 1 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಸಂಚಾರಿ ಮನೆಯಲ್ಲಿ ಮಿನಿ ಕಿಚನ್, ಮಲಗುವ ಕೋಣೆ, ಸ್ನಾನಗೃಹ, ಶೌಚಾಲಯ, ಫಾಯರ್, ಟೆರೇಸ್ ಸೇರಿದಂತೆ ಹೆಚ್ಚುವರಿ ಸ್ಥಳ ಕೂಡ ಇದೆ. ಅತ್ಯಂತ ಕಡಿಮೆ ಜಾಗದಲ್ಲಿ ಆರೋಗ್ಯಕರ ಹಾಗೂ ವಿನ್ಯಾಸಭರಿತ ಮನೆ ನಿರ್ಮಿಸಲಾಗಿದೆ.
ಇದನ್ನೂ ಓದಿ: ಅಪಾಯಕಾರಿ ನದಿ ದಾಟಿ ಕೆಲಸಕ್ಕೆ ಹಾಜರಿ: ಅಂಗನವಾಡಿ ಕಾರ್ಮಿಕರ ಸಹಾಯಕ್ಕೆ ಮುಂದಾದ ಆನಂದ್ ಮಹೀಂದ್ರಾ!
ಅರುಣ್ ಪ್ರಭುವಿನ ಅದ್ಭುತ ಆಲೋಚನೆಗೆ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಫಿದಾ ಆಗಿದ್ದಾರೆ. ಟ್ವೀಟ್ ಮಾಡಿಕೊಂಡಿರುವ ಉದ್ಯಮಿ ಮಹೀಂದ್ರಾ, ಬೊಲೆರೊ ಪಿಕಪ್‌ನಲ್ಲಿ ಇದೇ ರೀತಿಯ ಇನ್ನಷ್ಟು ವಿನ್ಯಾಸಭರಿತ ಆಲೋಚನೆಗಳನ್ನು ಹೊಂದಿಸಾಗುತ್ತದೆಯೇ ಎಂದು ಪ್ರಶ್ನಿಸಿರುವ ಅವರು ಯಾರಾದರೂ ಈ ವ್ಯಕ್ತಿಯನ್ನು(ಅರುಣ್ ಪ್ರಭು) ನಮಗೆ ಸಂಪರ್ಕಿಸಲು ಸಹಾಯ ಮಾಡುತ್ತೀರಾ? ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲು ಇಂತವುಗಳಿಗೆ ಕ್ವಿಕ್ ರೆಸ್ಪಾನ್ಸ್ ಮಾಡುವ ಉದ್ಯಮಿ ಮಹೀಂದ್ರಾ ಈ ಫೋಟೋಗಳನ್ನು ಕಂಡ ಕೂಡಲೇ ಟ್ವೀಟ್ ಮಾಡುವ ಮೂಲಕ ಅವರ ಅದ್ಭುತ ಪ್ರತಿಭೆಗೆ ಹೊಗಳಿಗೆಯ ಮಾತುಗಳನ್ನಾಡಿದ್ದಾರೆ.
ವಾಹನದಲ್ಲಿ ತಯಾರಾದ ಚಿಕ್ಕ ಮನೆ
ಆರ್ಕಿಟೆಕ್ಟ್(ವಾಸ್ತುಶಿಲ್ಪಿ) ಅಧ್ಯಯನ ಮಾಡಿರುವ ಅರುಣ್ ಪ್ರಭು ಟ್ರಕ್ ಹಾಗೂ ಇತರೆ ವಾಹನಗಳ ಆಕರ್ಷತೆಯನ್ನು ಹೆಚ್ಚಿಸುವಲ್ಲಿ ಇವರು ಹೆಸರು ಗಳಿಸಿದ್ದಾರೆ. ಇವರು ತಯಾರಿಸಿರುವ ಈ ವಾಹನಕ್ಕೆ ಸೋಲೋ 01 (Solo:01) ಎಂದು ನಾಮಕರಣ ಮಾಡಿದ್ದು ಇದು ಅಲೆಮಾರಿಗಳಿಗೆ ಹೇಳಿ ಮಾಡಿದ ಮನೆಯಾಗಿದೆ ಎಂದು ಹೇಳಲಾಗುತ್ತಿದೆ.