ಕರ್ನಾಟಕ

karnataka

ETV Bharat / bharat

ಅನಾಥ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯದ ದೃಶ್ಯ ಚಿತ್ರೀಕರಿಸಿದ ದುರುಳರು - Jalna rape case

ಅಪ್ಪ - ಅಮ್ಮ ಯಾರೂ ಇಲ್ಲದ ಬಾಲಕಿಯನ್ನು ಇಬ್ಬರು ಯುವಕರು ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದು, ಕೃತ್ಯದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ.

Rape case in Badlapur
ಅನಾಥ ಬಾಲಕಿಯ ಮೇಲೆ ಅತ್ಯಾಚಾರ

By

Published : Aug 14, 2021, 12:15 PM IST

ಜಲ್ನಾ (ಮಹಾರಾಷ್ಟ್ರ): ಅಪ್ರಾಪ್ತೆಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿದ್ದಲ್ಲದೇ ಕೃತ್ಯದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿರುವ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಬದ್ನಾಪುರದಲ್ಲಿ ನಡೆದಿದೆ.

ಆರೋಪಿಗಳನ್ನು ಬದ್ನಾಪುರದ ಕಂದಾರಿ ಖುರ್ದ್ ಗ್ರಾಮದ ಸೋಪನ್ ಧಕ್ನೆ ಮತ್ತು ಶಂಭು ಧಕ್ನೆ ಎಂದು ಗುರುತಿಸಲಾಗಿದೆ. ಸಂತ್ರಸ್ತೆಗೆ ಅಪ್ಪ - ಅಮ್ಮ ಯಾರೂ ಇಲ್ಲ. ಈಕೆಯನ್ನು ದೇವಸ್ಥಾನದ ಪೂಜಾರಿಯೊಬ್ಬರು ದತ್ತು ಪಡೆದು ಸಾಕುತ್ತಿದ್ದರು. ಈಕೆಯನ್ನು ಹೊಲಕ್ಕೆ ಕರೆದೊಯ್ದ ಕಾಮುಕರು ಅತ್ಯಾಚಾರ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಮಹಿಳೆ ಹೊತ್ತೊಯ್ದು ಅತ್ಯಾಚಾರ: ಅಟ್ಟಹಾಸ ಮೆರೆದಿದ್ದ ಕಾಮುಕರ ಬಂಧನ..!

ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬದ್ನಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಮೊಬೈಲ್​ ಫೋನ್​ ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details