ಕರ್ನಾಟಕ

karnataka

ETV Bharat / bharat

ಈ ಮರದ ಟ್ರೆಡ್​ಮಿಲ್​ಗೆ ಫಿದಾ ಆದ ಆನಂದ್​ ಮಹೀಂದ್ರಾ: ತಮಗೂ ಬೇಕು ಎಂದು ಮನವಿ - ಮರದ ಟ್ರೆಡ್​ಮಿಲ್ ತಯಾರಿಸಿದ ಬಡಗಿ

ಪೂರ್ವ ಗೋದಾವರಿ ಜಿಲ್ಲೆಯ ಮನದಪೇಟೆಯ ಸಾಮಾನ್ಯ ಬಡಗಿಯೊಬ್ಬರು ಒಂದು ದಿನ ತಮಗೆ ಗೊತ್ತಿರುವ ಒಬ್ಬರು ಟ್ರೆಡ್ ಮಿಲ್ ಬಳಕೆ ಮಾಡುತ್ತಿದ್ದನ್ನು ನೋಡಿದರಂತೆ. ಆ ವೇಳೆ ಆ ಮಷಿನ್​ ಕೆಲಸದ ಸ್ಥಿತಿ ಮತ್ತು ತಾಂತ್ರಿಕ ಸಮಸ್ಯೆಗಳು ಹಾಗೂ ಬಳಕೆ ಮತ್ತು ಅದಕ್ಕೆ ತಗಲುವ ವೆಚ್ಚದ ಬಗ್ಗೆ ವಿಚಾರಿಸಿದ್ದರಂತೆ. ಆನಂತರ ಈ ಸಾಧನವನ್ನು ಮರದಲ್ಲಿ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.

ಈ ಮರದ ಟ್ರೆಡ್​ಮಿಲ್​ಗೆ ಫಿದಾ ಆದ ಆನಂದ್​ ಮಹಿಂದ್ರಾ: ತಮಗೂ ಬೇಕು ಎಂದು ಮನವಿ
ಈ ಮರದ ಟ್ರೆಡ್​ಮಿಲ್​ಗೆ ಫಿದಾ ಆದ ಆನಂದ್​ ಮಹಿಂದ್ರಾ: ತಮಗೂ ಬೇಕು ಎಂದು ಮನವಿ

By

Published : Mar 24, 2022, 9:18 PM IST

Updated : Mar 24, 2022, 10:38 PM IST

ಪೂರ್ವ ಗೋದಾವರಿ (ಆಂಧ್ರಪ್ರದೇಶ) : ಸಾಮಾಜಿಕ ಜಾಲತಾಣವನ್ನು ತುಂಬಾನೆ ವ್ಯವಸ್ಥಿತವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿರುವ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಕಂಪನಿಯ ಚೇರ್ಮನ್​ ಆನಂದ್​ ಮಹೀಂದ್ರಾ ಹಲವರಿಗೆ ಸಹಾಯಸ್ತ ನೀಡಿದ್ದಾರೆ. ಇದರ ಬೆನ್ನಲ್ಲೇ ಈಗ ಜಿಲ್ಲೆಯ ಕುಶಲಕರ್ಮಿ ಕೆ.ಶ್ರೀನಿವಾಸ್ (48) ಅವರು ತಯಾರಿಸಿದ ವಿಶಿಷ್ಟ ಮರದ ಟ್ರೆಡ್ ಮಿಲ್ ಅಗತ್ಯವಿದೆ ಎಂದು ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ಮನದಪೇಟೆಯ ಸಾಮಾನ್ಯ ಕಮ್ಮಾರ ಒಂದು ದಿನ ತಮಗೆ ಗೊತ್ತಿರುವ ಒಬ್ಬರು ಟ್ರೆಡ್ ಮಿಲ್ ಬಳಕೆ ಮಾಡುತ್ತಿದ್ದನ್ನು ನೋಡಿದರಂತೆ. ಆ ವೇಳೆ ಆ ಮಷಿನ್​ ಕೆಲಸದ ಸ್ಥಿತಿ ಮತ್ತು ತಾಂತ್ರಿಕ ಸಮಸ್ಯೆಗಳು ಹಾಗೂ ಬಳಕೆ ಮತ್ತು ಅದಕ್ಕೆ ತಗಲುವ ವೆಚ್ಚದ ಬಗ್ಗೆ ವಿಚಾರಿಸಿದ್ದರಂತೆ.

ಈ ಮರದ ಟ್ರೆಡ್​ಮಿಲ್​ಗೆ ಫಿದಾ ಆದ ಆನಂದ್​ ಮಹೀಂದ್ರಾ: ತಮಗೂ ಬೇಕು ಎಂದು ಮನವಿ

ಇದನ್ನೂ ಓದಿ: ಬೆಂಗಳೂರು: ನಕಲಿ ಗನ್ ತೋರಿಸಿ ದರೋಡೆಗೆ ಯತ್ನಿಸಿದ್ದ ಚಾಲಾಕಿಗಳು ಅರೆಸ್ಟ್​

ನಂತರ ಅದನ್ನೆಲ್ಲಾ ಕೇಳಿ ಸುಮ್ಮನಾಗದ ಬಡಗಿ, ತಕ್ಷಣವೇ 10,000 ರೂಪಾಯಿಗಳನ್ನು ಖರ್ಚು ಮಾಡಿ ಕಡಿಮೆ ಬಜೆಟ್‌ನಲ್ಲಿ ಟ್ರೆಡ್ ಮಿಲ್ ನಿರ್ಮಿಸಿದ್ದಾರೆ. ಇನ್ನು ಭಾರಿ ಮೊತ್ತದಲ್ಲಿ ಖರೀದಿಸಲು ಸಾಧ್ಯವಾಗದ ಸಾಮಾನ್ಯ ಜನರಿಗೆ ಇದೊಂದು ದೊಡ್ಡ ಪ್ರಯೋಜನ ನೀಡಲಿದೆ. ಹಾಗೆ ಇದು ತಂತ್ರಜ್ಞಾನ ಅಡಕಗೊಂಡಿರುವ ಟ್ರೆಡ್​ ಮಿಲ್​ನ ಹಾಗೆಯೇ ಕೆಲಸ ಮಾಡುತ್ತದೆಯೇ ಎಂದೂ ಸಹ ಸ್ವತಃ ಪರೀಕ್ಷಿಸಿ ಯಶಸ್ಸು ಕಂಡಿದ್ದಾರೆ. ಇವರ ಈ ಅದ್ಭುತ ಕಾರ್ಯವನ್ನು ತೆಲಂಗಾಣದ ಐಟಿ ಸಚಿವರು ಸಹ ಶ್ಲಾಘಿಸಿದ್ದಾರೆ. ಇದೀಗ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಹ ಈ ಸಂಬಂಧ ಟ್ವೀಟ್​ ಮಾಡಿ ನಮಗೂ ಈ ವಿಶಿಷ್ಟವಾದ ಮರದ ಟ್ರೆಡ್ ಮಿಲ್ ಅನ್ನು ಕಳುಹಿಸಿಕೊಡಿ ಎಂದು ವಿನಂತಿಸಿದ್ದಾರೆ.

Last Updated : Mar 24, 2022, 10:38 PM IST

ABOUT THE AUTHOR

...view details