ಸಿದ್ದಿಪೇಟ್, ತೆಲಂಗಾಣ:ರೈತನೋರ್ವ ತನ್ನ ಪಾಳು ಬಿದ್ದ ಮನೆಯಲ್ಲೇ ಚಿತೆಯ ರೀತಿ ಕಟ್ಟಿಗೆ ಜೋಡಿಸಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಿಪೇಟ್ ಜಿಲ್ಲೆಯ ವೇಮುಲಘಾಟ್ ಎಂಬ ಗ್ರಾಮದಲ್ಲಿ ನಡೆದಿದ್ದು, ವೃದ್ಧನನ್ನು 70 ವರ್ಷದ ಮಲ್ಲಾರೆಡ್ಡಿ ಎಂದು ಗುರುತಿಸಲಾಗಿದೆ.
ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ದೇಹ ಪೂರ್ತಿ ಸುಟ್ಟು ಬೂದಿಯಾಗಿದೆ. ಉಳಿದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದ್ದು, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವೃದ್ಧನ ಆತ್ಮಹತ್ಯೆಗೆ ಶಾಸಕರ ಪ್ರತಿಕ್ರಿಯೆ