ಮುಂಬೈ:ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ ಆಘಾಡಿ ಸರ್ಕಾರದ ಮೇಲೆ ಪತನದ ತೂಗುಗತ್ತಿ ಅಲ್ಲಾಡುತ್ತಿದೆ. ಈ ಮಧ್ಯೆ ರೆಬೆಲ್ ನಾಯಕ ಏಕನಾಥ್ ಶಿಂದೆ ಅವರ ಮುಂದಿನ ನಡೆಗಳ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಶಿವಸೇನೆಯ 55 ರಲ್ಲಿ 40 ಶಾಸಕರ ಬೆಂಬಲ ತನಗಿದೆ ಎಂದು ಏಕನಾಥ್ ಶಿಂದೆ ಹೇಳಿಕೊಂಡಿದ್ದಾರೆ. ಇವರೆಲ್ಲರೂ ಈಗ ಗುವಾಹಟಿಯ ರ್ಯಾಡಿಸನ್ ಬ್ಲೂ ಹೊಟೇಲ್ನಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಏಕನಾಥ್ ಶಿಂದೆ ಮುಂದಿರುವ ಆಯ್ಕೆಗಳೇನು? ಮಹಾರಾಷ್ಟ್ರದಲ್ಲಿ ರಚನೆಯಾಗುತ್ತಾ ಹೊಸ ಸರ್ಕಾರ?
ಏಕನಾಥ್ ಶಿಂದೆ ಅವರನ್ನು ಶಿವಸೇನಾ ಬಂಡಾಯ ಶಾಸಕರ ಗುಂಪಿನ ನಾಯಕರನ್ನಾಗಿ ಆಯ್ಕೆ ಮಾಡಬಹುದು. ಮೂರನೇ ಒಂದರಷ್ಟು ಶಿವಸೇನೆ ಶಾಸಕರು ತಮ್ಮೊಂದಿಗೆ ಇರುವುದರಿಂದ ತಮ್ಮದೇ ಅಸಲಿ ಶಿವಸೇನೆ ಎಂದು ಏಕನಾಥ್ ಹೇಳಿಕೊಂಡಿದ್ದಾರೆ. ತಮ್ಮ ಬೆಂಬಲಿಗರ ಪಟ್ಟಿ ನೀಡಲು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಸಮಯ ಕೇಳಬಹುದು. ವಿಧಾನ ಸಭೆಯ ಡೆಪ್ಯೂಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರನ್ನು ಭೇಟಿಯಾಗಿ ತಮ್ಮ ಗುಂಪನ್ನೇ ಅಸಲಿ ಶಿವಸೇನೆಯ ಮಾನ್ಯತೆ ನೀಡುವಂತೆ ಕೋರಬಹುದು.
What could Sena rebel Eknath Shindes next move be?
ಹಾಗಾದರೆ, ಏಕನಾಥ್ ಶಿಂದೆ ಮುಂದೆ ಏನು ಮಾಡಬಹುದು? ಒಟ್ಟು ಎಷ್ಟು ಶಾಸಕರು ಅವರ ಜೊತೆಗಿರಬಹುದು? ಇಂದು ಮತ್ತೆ ಯಾವೆಲ್ಲ ರಾಜಕೀಯ ಬೆಳವಣಿಗೆಗಳಾಗಬಹುದು?. ಇಲ್ಲಿದೆ ಒಂದು ವಿಶ್ಲೇಷಣೆ.
ಸಾಧ್ಯತೆಗಳು..
- ಏಕನಾಥ್ ಶಿಂದೆ ಅವರನ್ನು ಶಿವಸೇನಾ ಬಂಡಾಯ ಶಾಸಕರ ಗುಂಪಿನ ನಾಯಕರನ್ನಾಗಿ ಆಯ್ಕೆ ಮಾಡಬಹುದು. ಮೂರನೇ ಒಂದರಷ್ಟು ಶಿವಸೇನೆ ಶಾಸಕರು ತಮ್ಮೊಂದಿಗೆ ಇರುವುದರಿಂದ ತಮ್ಮದೇ ಅಸಲಿ ಶಿವಸೇನೆ ಎಂದು ಏಕನಾಥ್ ಹೇಳಿಕೊಂಡಿದ್ದಾರೆ.
- ತಮ್ಮ ಬೆಂಬಲಿಗರ ಪಟ್ಟಿ ನೀಡಲು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಸಮಯ ಕೇಳಬಹುದು.
- ವಿಧಾನ ಸಭೆಯ ಡೆಪ್ಯೂಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರನ್ನು ಭೇಟಿಯಾಗಿ ತಮ್ಮ ಗುಂಪನ್ನೇ ಅಸಲಿ ಶಿವಸೇನೆಯ ಮಾನ್ಯತೆ ನೀಡುವಂತೆ ಕೋರಬಹುದು.
- ಉದ್ಧವ್ ಠಾಕ್ರೆ ತಮ್ಮ ಬೆಂಬಲಿಗ ಶಾಸಕರ ಸಭೆ ಕರೆದಿದ್ದು, ರಾಜೀನಾಮೆ ನೀಡುವ ಬಗ್ಗೆ ಅಥವಾ ವಿಶ್ವಾಸಮತ ಯಾಚನೆಯ ಬಗ್ಗೆ ಘೋಷಿಸಬಹುದು.
- ವರ್ಚುವಲ್ ಮೂಲಕ ಸರ್ಕಾರದ ಕಾರ್ಯದರ್ಶಿಗಳಿಗೆ ಉದ್ಧವ್ ಠಾಕ್ರೆ ಧನ್ಯವಾದಗಳನ್ನು ತಿಳಿಸಲಿದ್ದಾರೆ.
- ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿವರಿಗೆ ಕೋವಿಡ್ ಸೋಂಕು ತಗುಲಿರುವುದರಿಂದ, ಶಿಂದೆ ಅವರನ್ನು ಮುಖತಃ ಭೇಟಿಯಾಗದೇ ಪತ್ರ ವ್ಯವಹಾರದ ಮೂಲಕವೇ ಸಂಪರ್ಕ ಸಾಧಿಸಬಹುದು.
- ಎಲ್ಲ ಬಂಡಾಯ ಶಿವಸೇನೆ ಶಾಸಕರು ಪಣಜಿಗೆ ಶಿಫ್ಟ್ ಆಗಬಹುದು.
- ಇನ್ನಿಬ್ಬರು ಬಂಡಾಯ ಶಾಸಕರು ಸೂರತ್ಗೆ ತೆರಳಿ, ಅಲ್ಲಿಂದ ಗುವಾಹಟಿಗೆ ಹೋಗಬಹುದು.
- ಒಂದೊಮ್ಮೆ ಶಿಂದೆ ಬಂಡಾಯ ಗುಂಪಿನ ನಾಯಕರಾಗಿ ಆಯ್ಕೆಯಾದರೆ, ಬಿಜೆಪಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಬಹುದು.
- ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು.
- ಏಕನಾಥ್ ಶಿಂದೆ ಗುಂಪು ಅಸಲಿ ಅಥವಾ ಅಲ್ಲ ಎಂಬುದರ ನಿರ್ಣಯಕ್ಕೆ ಕಾನೂನು ಹೋರಾಟ ಆರಂಭವಾಗಬಹುದು.
- ರವಿವಾರ, ಜೂನ್ 26 ರ ಹೊತ್ತಿಗೆ ಹೊಸ ಸರ್ಕಾರ ರೂಪು ತಳೆಯಬಹುದು.