ಹೈದರಾಬಾದ್: ಇಲ್ಲಿನ ಅಂಬರ್ಪೇಟೆ ಪ್ರದೇಶದಲ್ಲಿ ಬೀದಿನಾಯಿ ಹಾವಳಿಗೆ 4 ವರ್ಷದ ಬಾಲಕ ಸಾವನ್ನಪ್ಪಿದ ವಿಚಾರ ಇಂದಿಗೂ ಅನೇಕರಿಗೆ ಭಯ ಮೂಡಿಸುತ್ತದೆ. ಇದಾದ ಬಳಿಕ ನಗರ ಮತ್ತು ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದ್ದು, ಅನೇಕ ಕಡೆ ನಾಯಿಗಳ ಭೀಕರ ದಾಳಿ ಆತಂಕದಲ್ಲಿ ಜನರಿದ್ದರಾರೆ ಎಂಬುದು ಸುಳ್ಳಲ್ಲ.
ಸಾಂಕ್ರಾಮಿಕದಂತೆ ಆಗುತ್ತಿರುವ ನಾಯಿ ಹಾವಳಿ ವಿಚಾರದಲ್ಲಿ ಮೂಡುವ ಪ್ರಶ್ನೆ ಎಂದರೆ, ಯಾಕೆ ಈ ಬಗ್ಗೆ ನಗರದ ಅಧಿಕಾರಿಗಳು ಕಾಳಜಿ ಹೊಂದಿಲ್ಲ ಎಂಬುದಾಗಿದೆ. ಯಾಕೆ ಈ ಬೀದಿ ನಾಯಿಗಳ ಸಂಖ್ಯೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲು ಬಿಡುತ್ತಿದ್ದಾರೆ ಎಂಬುದು. ಈ ಬೀದಿ ನಾಯಿಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಯಾಕೆ ಅಸಡ್ಡೆ ತೋರುತ್ತಿದ್ದಾರೆ ಎಂಬುದು ಆಗಿದೆ.
ಸಾರ್ವಜನಿಕರ ಕಾಳಜಿ ವಿಚಾರವಾಗಿರುವ ಇದರಲ್ಲಿ ಪರಿಹಾರವನ್ನು ಹುಡುಕುವ ಬದಲಾಗಿ ಕಾರ್ಪೊರೇಷನ್ಗಳು ಪರಸ್ಪರ ಆರೋಪ - ಪ್ರತ್ಯಾರೋಪ ಮಾಡುತ್ತಿದ್ದಾರೆ. ಸ್ಥಳೀಯರ ನಿರಾಸಕ್ತಿ, ನಿರ್ಲಕ್ಷ್ಯಗಳು ಈ ವಿಚಾರಕ್ಕೆ ಕಾರಣ ಎಂದರೆ, ಇತ್ತ ಅಧಿಕಾರಿಗಳು ನಾಯಿಗಳ ಹಾವಳಿ ತಡೆಗೆ ವಿವಿಧ ಸಮಸ್ಯೆಗಳ ಕಾರಣ ಹುಡುಕುತ್ತಿದ್ದಾರೆ.
ಸಂತಾನ ಹರಣಕ್ಕೆ ನಿಧಿ ಬಳಕೆ: ಉಳಿದ ವಿಚಾರಗಳಿಗೆ ಹೋಲಿಕೆ ಮಾಡಿದಾಗ ಸ್ಥಳೀಯ ಪ್ರತಿನಿಧಿಗಳು ಅಥವಾ ನಾಗರಿಕ ಮಂಡಳಿಗಳು ಈ ನಾಯಿ ಹಾವಳಿ ವಿಚಾರಕ್ಕೆ ಕಡಿಮೆ ಪ್ರಮಾಣದ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರ ಪ್ರಮುಖ ವಿಷಯಗಳು ಏನೇ ಇದ್ದರೂ ಅದು ರಸ್ತೆ, ಕುಡಿಯುವ ನೀರು, ಚರಂಡಿ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಂಶಗಳು ಆಗಿರುತ್ತದೆ. ಇನ್ನು ಬೀದಿ ನಾಯಿಗಳ ಹಾವಳಿ ತಡೆಗೆ ನೀಡಲಾದ ಅಂದರೆ ಬೀದಿನಾಯಿಗಳ ಸಂತಾನ ಹರಣಕ್ಕೆ ನಿಗದಿಸಲಾದ ನಿಧಿಯನ್ನು ಕಾಲ ಕಾಲಕ್ಕೆ ತೆಗೆದುಕೊಳ್ಳಬೇಕಿದ್ದು, ಇದರ ನಿಯಂತ್ರಣಕ್ಕೆ ಮುಂದಾಗಬೇಕಿದೆ.