ಪುಲ್ವಾಮಾ, ಜಮ್ಮು ಮತ್ತು ಕಾಶ್ಮೀರ್: ಪುಲ್ವಾಮಾದ ಪರಿಗಮ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿಯಲ್ಲಿ ಭದ್ರತಾ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ ಎರಡರಿಂದ ಮೂವರು ಉಗ್ರರು ಈ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಎಂದು ತಿಳಿದುಬಂದಿತ್ತು.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನೆವ್ ಪರಿಗಮ್ ಪ್ರದೇಶದಲ್ಲಿ ಭಾನುವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದ್ದು, ಭದ್ರತಾ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ ಮೂವರು ಉಗ್ರರು ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.. ವಿವರಗಳ ಪ್ರಕಾರ, ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಈ ಪ್ರದೇಶದಲ್ಲಿ ಉಗ್ರಗಾಮಿಗಳು ಬೀಡು ಬಿಟ್ಟಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದುಕೊಂಡಿತ್ತು
ಮಾಹಿತಿ ಪಡೆದ ಜಂಟಿ ತಂಡವು ಈ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಪಡೆಗಳ ಜಂಟಿ ತಂಡಗಳು ಶಂಕಿತ ಸ್ಥಳವನ್ನು ಸಮೀಪಿಸಿದ ತಕ್ಷಣ ಉಗ್ರರು ಜಂಟಿ ಪಡೆಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಉಗ್ರರ ದಾಳಿಗೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರು. ಈ ವೇಳೆ ಉಗ್ರರು ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡಿದೆ. ಅಷ್ಟೇ ಅಲ್ಲ ಈ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆ ಅಧಿಕಾರಿಯೊಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಇಬ್ಬರಿಂದ ಮೂವರು ಉಗ್ರರಿದ್ದು, ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡದಿತ್ತು. ಸುಮಾರು ಎರಡು ವರ್ಷಗಳ ನಂತರ ಪುಲ್ವಾಮಾ ಜಿಲ್ಲೆಯಲ್ಲಿ ಸೇನೆ ಮತ್ತು ಉಗ್ರರ ನಡುವೆ ಘರ್ಷಣೆ ನಡೆದಿರುವುದು ಗಮನಾರ್ಹ. ಎನ್‌ಕೌಂಟರ್ ಬಗ್ಗೆ ವಿವರಗಳನ್ನು ನೀಡುವಾಗ, ಲಾರೋ ಪರಿಗಮ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ಪ್ರಾರಂಭವಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆಗಳು ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತುವರೆದಿವೆ ಮತ್ತು ಜನರ ಸಂಚಾರವನ್ನು ನಿಷೇಧಿಸಿವೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 8 ರಂದು ಬಾರಾಮುಲ್ಲಾ ಪೋಲೀಸ್ ಮತ್ತು ಭಾರತೀಯ ಸೇನೆಯ 16 ಸಿಖ್ ಲಘು ಪದಾತಿ ದಳದ ಜಂಟಿ ಪಡೆಗಳು ಮೂವರು ಉಗ್ರರನ್ನು ಬಂಧಿಸಿ, ಉಗ್ರರಿಂದ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡರು. ಆಗಸ್ಟ್ 11 ರಂದು ಉರಿಯ ಪೊವಾರಿಯನ್ ಥಾಜಲ್‌ನಲ್ಲಿ ನಡೆದ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಿತ್ತು. ಈ ವೇಳೆ ಬಂಧಿತ ಉಗ್ರರಿಂದ ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳು, ಎರಡು ಪಿಸ್ತೂಲ್‌ಗಳು, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು, ಹತ್ತು ಲೈವ್ ರೌಂಡ್‌ಗಳು ಮತ್ತು 50 ಸಾವಿರ ರೂಪಾಯಿ ನಗದು ಮತ್ತು ನಾಲ್ಕು ಚಕ್ರಗಳ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಬಾರಾಮುಲ್ಲಾ ಎಸ್‌ಎಸ್‌ಪಿ ನಾಗಪುರೆ ತಿಳಿಸಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ಕಾಶ್ಮೀರ ಕಣಿವೆಯಾದ್ಯಂತ ಭಯೋತ್ಪಾದಕರು ಯುದ್ಧದಂತಹ ಮಳಿಗೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಸರ್ಕಾರದ ಏಜೆನ್ಸಿಗಳಿಗೆ ತಿಳಿದಿತ್ತು. ಏಜೆನ್ಸಿಗಳ ಖಚಿತವಾದ ಗುಪ್ತಚರ ಒಳಹರಿವಿನ ಆಧಾರದ ಮೇಲೆ ಕುಪ್ವಾರದ ಮಚ್ಚಲ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆ, ಬಿಎಸ್‌ಎಫ್ ಮತ್ತು ಜೆಕೆಪಿ ಜಂಟಿ ಕಾರ್ಯಾಚರಣೆಯನ್ನು ಆಗಸ್ಟ್ 15 ರಿಂದ 18 ರವರೆಗೆ ಕೈಗೊಂಡಿತ್ತು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಐದು ಎಕೆ ಸಿರೀಸ್ ರೈಫಲ್ಸ್, ಎಂಟು ಎಕೆ ಮ್ಯಾಗಜೀನ್‌ಗಳು, ಏಳು 9 ಎಂಎಂ ಪಿಸ್ತೂಲ್‌ಗಳು, ಹದಿನೈದು 9 ಎಂಎಂ ಪಿಸ್ತೂಲ್ ಮ್ಯಾಗಜೀನ್‌ಗಳು, ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳು, 7.62 ಎಂಎಂ ಎಕೆ ರೌಂಡ್‌ಗಳನ್ನು ಒಳಗೊಂಡಂತೆ ಅನೆಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಓದಿ:Soldier Missing: ರಜೆಯ ಮೇಲಿದ್ದ ಭಾರತೀಯ ಯೋಧ ನಾಪತ್ತೆ; ಭದ್ರತಾ ಸಿಬ್ಬಂದಿಯಿಂದ ಶೋಧ