ಆನೆಗಳ ನೀರಾಟ, ಕೆಸರೆರಚಾಟದಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಅದರಂತೆ ಇಲ್ಲೊಂದು ಆನೆ ಮರದ ಮೇಲಿದ್ದ ಹಲಸಿನ ಹಣ್ಣನ್ನು ಕಿತ್ತುಕೊಳ್ಳಲು ಮಾಡಿದ ಸರ್ಕಸ್ ಹುಬ್ಬೇರಿಸುವಂತೆ ಮಾಡಿದೆ.
ಮರದ ಮೇಲಿದ್ದ ಹಲಸಿನ ಹಣ್ಣನ್ನು ಆನೆಯು ಕೀಳಲು ಮರವನ್ನೇ ಅಲ್ಲಾಡಿಸಿದೆ. ಈ ಪ್ರಯತ್ನ ವಿಫಲವಾದಾಗ ಉಪಾಯ ಮಾಡಿದ ಆನೆ ತನ್ನೆರಡು ಕಾಲುಗಳನ್ನು ಎತ್ತಿ ಮರದ ಮೇಲಿಟ್ಟು ಸೊಂಡಿಲಿನಿಂದ ಎತ್ತರದಲ್ಲಿದ್ದ ಹಲಸನ್ನು ಕಿತ್ತಿದೆ.
ಇದನ್ನು ಅಲ್ಲಿಯೇ ಇದ್ದ ಜನರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊ ಚಿತ್ರೀಕರಣ ವೇಳೆ ಜನರು ಆನೆಯ ಸಾಹಸವನ್ನು ಕಂಡ ಕೂಗಿದ್ದಾರೆ. ಅಲ್ಲದೇ, ಹಲಸನ್ನು ಯಶಸ್ವಿಯಾಗಿ ಕಿತ್ತ ಮೇಲೆ ಚಪ್ಪಾಳೆ ತಟ್ಟುತ್ತಿರುವುದು ವಿಡಿಯೋದಲ್ಲಿದೆ.
ಆನೆಯ ಈ ಸಾಹಸ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, "ಮನುಷ್ಯರಿಗೆ ಮಾವಿನ ಹಣ್ಣಿನಂತೆ, ಆನೆಗಳಿಗೆ ಹಲಸಿನ ಹಣ್ಣು ಪ್ರಿಯವಾದುದು. ಹಲಸಿನ ಹಣ್ಣನ್ನು ಪಡೆಯಲು ಆನೆ ಮಾಡಿದ ಯಶಸ್ವಿ ಪ್ರಯತ್ನ ಹೃದಯಸ್ಪರ್ಶಿಯಾಗಿದೆ" ಎಂದು ಬರೆದುಕೊಂಡಿದ್ದಾರೆ.
ಓದಿ:44 ವಿದೇಶ, 110 ನಗರ ಸುತ್ತಿದ 5 ವರ್ಷದ ಬಾಲಕಿ!