ವಿಲ್ಲುಪುರಂ(ತಮಿಳುನಾಡು):ಅಪ್ಪ- ಅಮ್ಮನ ಜಗಳದ ಮಧ್ಯೆ ಕೂಸು ಬಡವಾಯ್ತು ಎನ್ನುವ ಗಾದೆ ಮಾತು ಮೇಲಿಂದ ಮೇಲೆ ಸಾಬೀತು ಆಗುತ್ತಿರುತ್ತದೆ. ಸದ್ಯ ಇಂತಹದೊಂದು ಘಟನೆ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ.
ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ತಿಂಡಿವನಂನ ರಘುರಾಮನ್ ಹಾಗೂ ಆತನ ಪತ್ನಿ ರಾಜೇಶ್ವರಿ ನಡುವೆ ಕಳೆದ ತಿಂಗಳ ಜಗಳವಾಗಿತ್ತು. ಇದರಿಂದ ಕೋಪಗೊಂಡಿರುವ ರಾಜೇಶ್ವರಿ ಗಂಡನ ಮನೆ ಬಿಟ್ಟು ತವರು ಮನೆ ಕಲ್ಲಕುರಿಚಿಗೆ ತೆರಳಿದ್ದಳು. ಸುಮಾರು 20 ದಿನ ಕಳೆದರೂ ಆಕೆ ವಾಪಸ್ ಗಂಡನ ಮನೆಗೆ ಬಂದಿರಲಿಲ್ಲ. ಹೀಗಾಗಿ, ಕಿರಿಯ ಮಗ ಶಬರಿನಾಥ್ ತಾಯಿ ಭೇಟಿ ಮಾಡುವ ನಿರ್ಧಾರ ಮಾಡಿದ್ದಾನೆ. ಸುಮಾರು 92 ಕಿಲೋ ಮೀಟರ್ ದೂರ ಇರುವ ಕಲ್ಲಕುರಿಚಿಗೆ ಸೈಕಲ್ ಮೇಲೆ ತೆರಳಲು ಮುಂದಾಗಿದ್ದಾನೆ.
ಮಗುವಿನ ರಕ್ಷಣೆ ಮಾಡಿದ ಪೊಲೀಸರು 8 ವರ್ಷದ ಶಬರಿನಾಥ್ ಸ್ನೇಹಿತನ ಸೈಕಲ್ ಖರೀದಿ ಮಾಡಿ, ಸೋಮವಾರ ಮಧ್ಯರಾತ್ರಿ ಮನೆಯಿಂದ ಪ್ರಯಾಣ ಆರಂಭಿಸಿದ್ದಾನೆ. ಸುಮಾರು 14 ಕಿಲೋ ಮೀಟರ್ ಹೋಗಿ, ವಿಲ್ಲುಪುರಂ - ನಾಗಪಟ್ಟಣಂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಆತನನ್ನ ನೋಡಿರುವ ಪೊಲೀಸರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿರಿ: ಕಲಾಪಕ್ಕೆ ಬಿಜೆಪಿ ಸಂಸದರ ಗೈರು, ಪ್ರಧಾನಿ ತೀವ್ರ ಅಸಮಾಧಾನ!
ಈ ವೇಳೆ ತಾಯಿ ಭೇಟಿಗಾಗಿ ತೆರಳುತ್ತಿರುವುದಾಗಿ ಹೇಳಿದ್ದಾನೆ. ತಕ್ಷಣವೇ ಪೊಲೀಸರು ಶಬರಿನಾಥನನ್ನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ, ವಿಚಾರಿಸಿದಾಗ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾನೆ. ಪೊಲೀಸರು ಬಾಲಕನ ತಂದೆ ರಘುರಾಮನ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತ ಠಾಣೆಗೆ ಆಗಮಿಸಿದ್ದಾನೆ. ಇದರ ಬಗ್ಗೆ ತಾಯಿ ರಾಜೇಶ್ವರಿಗೂ ಮಾಹಿತಿ ನೀಡಲಾಗಿದೆ. ಇದರ ಫಲವಾಗಿ ಇಂದು ತಾಯಿಯನ್ನ ಭೇಟಿ ಮಾಡುವಲ್ಲಿ ಶಬರಿನಾಥ್ ಯಶಸ್ವಿಯಾಗಿದ್ದಾನೆ.