ಕರ್ನಾಟಕ

karnataka

ETV Bharat / bharat

ಅಸ್ಸಾಂನಲ್ಲಿ 6.4 ತೀವ್ರತೆಯ ಭೂಕಂಪನ: ಈಶಾನ್ಯ ಭಾರತ, ಬಂಗಾಳದಲ್ಲಿ ನಡುಗಿದ ಭೂಮಿ

earthquake
ಅಸ್ಸಾಂನಲ್ಲಿ ಭೂಕಂಪನ

By

Published : Apr 28, 2021, 8:31 AM IST

Updated : Apr 28, 2021, 9:41 AM IST

08:25 April 28

ಅಸ್ಸಾಂನಲ್ಲಿ ಭೂಕಂಪನ

ಅಸ್ಸಾಂ: ಅಸ್ಸಾಂನಲ್ಲಿ ಇಂದು ಬೆಳಗ್ಗಿನ ಜಾವ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ 6.4ರಷ್ಟಿತ್ತು ಎಂದು ವರದಿಯಾಗಿದೆ.

ಬೆಳಗ್ಗೆ ಸುಮಾರು 7.51ಕ್ಕೆ ಅಸ್ಸಾಂ ಒಳಗೊಂಡು ಇಡೀ ಈಶಾನ್ಯ ಭಾರತ ಹಾಗು ಉತ್ತರ ಬಂಗಾಳದ ಪ್ರದೇಶದಲ್ಲಿ ಭೂಮಿ ಕಂಪಿಸಿುದೆ. ಪರಿಣಾಮ, ಜನರು ಆಂತಕಕ್ಕೊಳಗಾದರು. ಇಲ್ಲಿನ ಮನೆಗಳ ಛಾವಣೆ ಕುಸಿದು ಹೋಗಿವೆ. ಜೊತೆಗೆ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಆಗಿರುವ ಬಗ್ಗೆ ವರದಿಗಳಿಲ್ಲ. ಭೂಕಂಪನ ಸೃಷ್ಟಿಸಿದ ಅನಾಹುತದ ಕುರಿತ ಕೆಲವು ಫೋಟೋಗಳನ್ನು ಸಚಿವ ಹಿಮಂತ ಬಿಸ್ವಾ ಸರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಸಿಎಂ ಸೋನಾವಾಲ್ ಮನವಿ

'ಅಸ್ಸಾಂನಲ್ಲಿ ಭೂಕಂಪನ ಸಂಭವಿಸಿದೆ. ಎಲ್ಲರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಎಲ್ಲರೂ ಜಾಗರೂಕರಾಗಿರುವಂತೆ ವಿನಂತಿಸುತ್ತೇನೆ' ಎಂದು ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಭರವಸೆ

ಘಟನೆ ತಿಳಿದು ಸಿಎಂ ಸೋನಾವಾಲ್‌ ಅವರಿಗೆ ಕರೆ ಮಾಡಿದ ಪ್ರಧಾನಿ ಮೋದಿ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜೊತೆಗೆ ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ನೀಡುವ ಕುರಿತು ಭರವಸೆ ನೀಡಿದ್ದಾರೆ.

ಭೂಕಂಪನ ಕೇಂದ್ರವನ್ನು ಅಸ್ಸಾಂ ರಾಜಧಾನಿ ಗುವಾಹಟಿಯಿಂದ 140 ಕಿಮೀ ದೂರದಲ್ಲಿರುವ ಧೇಕಿಯಾಜುಲಿ ಎಂದು ಗುರುತಿಸಲಾಗಿದೆ.

Last Updated : Apr 28, 2021, 9:41 AM IST

ABOUT THE AUTHOR

...view details