ಪೋರ್ಟ್ ಬ್ಲೇರ್(ಅಂಡಮಾನ್ ನಿಕೋಬಾರ್): ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ನಿಕೋಬಾರ್ ದ್ವೀಪದ ಕ್ಯಾಂಪ್ಬೆಲ್ ಕೊಲ್ಲಿಯ ಈಶಾನ್ಯಕ್ಕೆ ಸುಮಾರು 70 ಕಿಲೋಮೀಟರ್ ದೂರದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ(ಎನ್ಸಿಎಸ್) ಮಾಹಿತಿ ನೀಡಿದೆ. ಭಾನುವಾರ ಬೆಳಗ್ಗೆ 7.02ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಗುರುತಿಸಲ್ಪಟ್ಟಿದೆ ಎಂದು ಎನ್ಸಿಎಸ್ ಟ್ವೀಟ್ ಮಾಡಿದೆ.
ಅಂಡಮಾನ್ ನಿಕೋಬಾರ್ನಲ್ಲಿ ಭೂಕಂಪ: 4.9ರಷ್ಟು ತೀವ್ರತೆ ದಾಖಲು - ಅಂಡಮಾನ್ ನಿಕೋಬಾರ್ನಲ್ಲಿ ಭೂಕಂಪ
ಅಂಡಮಾನ್ ನಿಕೋಬಾರ್ ದ್ವೀಪದ ಕ್ಯಾಂಪ್ಬೆಲ್ ಕೊಲ್ಲಿಯ ಈಶಾನ್ಯದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ.
ಅಂಡಮಾನ್ ನಿಕೋಬಾರ್ನಲ್ಲಿ ಭೂಕಂಪ: 4.9ರಷ್ಟು ತೀವ್ರತೆ ದಾಖಲು
ಇದಕ್ಕೂ ಮುನ್ನ ಕ್ಯಾಂಪ್ಬೆಲ್ ಕೊಲ್ಲಿಯಲ್ಲಿ ಬುಧವಾರ ಸಂಜೆ 6.07ಕ್ಕೆ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 4.4ರಷ್ಟು ತೀವ್ರತೆ ದಾಖಲಾಗಿತ್ತು. ಈ ಭೂಕಂಪ ಜರುಗಿದ ಮೂರು ದಿನಗಳ ನಂತರ ಇದೇ ಕೊಲ್ಲಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್ಸಿಎಸ್ ಟ್ವೀಟ್ ಮಾಡಿದೆ.