ಕರ್ನಾಟಕ

karnataka

ETV Bharat / bharat

ರಾಜಸ್ಥಾನದಲ್ಲಿ 4.6, ಅಸ್ಸೋಂನಲ್ಲಿ 4.1 ತೀವ್ರತೆಯ ಭೂಕಂಪ.. - ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ

ರಾಜಸ್ಥಾನದ ಜಲೋರ್‌ನಲ್ಲಿ 4.6 ರಷ್ಟು ಹಾಗೂ ಅಸ್ಸೋಂನ ಗುವಾಹಟಿಯಲ್ಲಿ 4.1 ತೀವ್ರತೆಯ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.

An earthquake with a magnitude of 4.6 on the Richter Scale hit Jalore
ರಾಜಸ್ಥಾನದ ಜಲೋರ್‌ನಲ್ಲಿ 4.6 ರಷ್ಟು ತೀವ್ರತೆಯ ಭೂಕಂಪನ

By

Published : Nov 20, 2021, 6:17 AM IST

Updated : Nov 20, 2021, 2:25 PM IST

ಜಲೋರ್‌/ಗುವಾಹಟಿ: ರಾಜಸ್ಥಾನದ ಜಲೋರ್‌ನಲ್ಲಿ ಇಂದು ನಸುಕಿನ ಜಾವ 2:26ಕ್ಕೆ ಭೂಕಂಪನ ಸಂಭವಿಸಿದ್ದು (Earthquake in Rajasthan's Jalore), ರಿಕ್ಟರ್‌ ಮಾಪಕದಲ್ಲಿ 4.6 ರಷ್ಟು ತೀವ್ರತೆ ದಾಖಲಾಗಿದೆ.

ರಾಜಸ್ಥಾನದ ಜಲೋರ್‌ನಲ್ಲಿ ಭೂಕಂಪದ

ಜೋಧ್‌ಪುರದಿಂದ ದಕ್ಷಿಣ-ನೈಋತ್ಯಕ್ಕೆ 150 ಕಿಮೀ ದೂರ ಹಾಗೂ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್​ಸಿಎಸ್ -National Center for Seismology) ಮಾಹಿತಿ ನೀಡಿದೆ.

ಇನ್ನು ಅಸ್ಸೋಂ ರಾಜ್ಯದ ಗುವಾಹಟಿಯಲ್ಲಿ (Earthquake in Assam's Guwahati) ಕೂಡ ಇಂದು ಮಧ್ಯಾಹ್ನ 1 ಗಂಟೆಗೆ ಭೂಮಿ ಕಂಪಿಸಿದ್ದು, 4.1 ರಷ್ಟು ತೀವ್ರತೆ ದಾಖಲಾಗಿದೆ. ಗುವಾಹಟಿಯ ಪಶ್ಚಿಮ-ನೈಋತ್ಯದಿಂದ 38 ಕಿ.ಮೀ ದೂರದಲ್ಲಿ ಹಾಗೂ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ.

ಅಸ್ಸೋಂನ ಗುವಾಹಟಿಯಲ್ಲಿ ಭೂಕಂಪ

ಎರಡೂ ಘಟನೆಗಳಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಎನ್​ಸಿಎಸ್​ ತಿಳಿಸಿದೆ.

Last Updated : Nov 20, 2021, 2:25 PM IST

ABOUT THE AUTHOR

...view details