ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದ ಕಿಶ್ತ್ವಾರ್‌, ಮ್ಯಾನ್ಮಾರ್​ನಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

ಭಾನುವಾರ (ಅ.22) ರಾತ್ರಿ 11 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ 3.5 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಇನ್ನೊಂದೆಡೆ ಮ್ಯಾನ್ಮಾರ್​ನಲ್ಲೂ ಭೂಕಂಪದ ವರದಿಯಾಗಿದ್ದು, ಅಲ್ಲಿ 4.3 ರಷ್ಟು ತೀವ್ರತೆಯ ವರದಿಯಾಗಿದೆ.

earthquake
ಭೂಕಂಪನ

By ETV Bharat Karnataka Team

Published : Oct 23, 2023, 9:19 AM IST

ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ) :ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕಿಶ್ತ್ವಾರ್‌ನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.5 ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಈ ಪ್ರದೇಶದಲ್ಲಿ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದರಿಂದ ಸ್ಥಳೀಯಲ್ಲಿ ಆತಂಕ ಮನೆಮಾಡಿತ್ತು. ಭೂಕಂಪದಿಂದ ಇದುವರೆಗೆ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಹಾನಿ ಆಗಿರುವ ವರದಿಯಾಗಿಲ್ಲ. ಈ ಹಿಂದೆಯೂ ಕೂಡ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿರುವ ಪ್ರಕರಣಗಳು ಜರುಗಿವೆ.

ಇನ್ನು ಭಾನುವಾರ ಬೆಳಗ್ಗೆ ನೇಪಾಳದಲ್ಲಿ ಮತ್ತೊಂದು 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜಧಾನಿ ಕಠ್ಮಂಡುವಿನಿಂದ ಪಶ್ಚಿಮಕ್ಕೆ 55 ಕಿಮೀ ದೂರದಲ್ಲಿರುವ ಧಾಡಿಂಗ್​ನಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಘಟನೆಯಿಂದಾಗಿ ಸುಮಾರು ಎರಡು ಡಜನ್ ಮನೆಗಳು ಹಾನಿಗೊಳಗಾಗಿವೆ. ಮ್ಯಾನ್ಮಾರ್‌ನ ಐಜ್ವಾಲ್‌ನಲ್ಲಿಯೂ ಭೂಕಂಪನದ ಅನುಭವವಾಗಿದೆ.

ಮ್ಯಾನ್ಮಾರ್​​ನಲ್ಲೂ 4.3 ರಷ್ಟು ತೀವ್ರತೆಯ ಭೂಕಂಪ:ಮತ್ತೊಂದೆಡೆ, ಭಾನುವಾರ ಸಂಜೆ 5:18ರ ಸುಮಾರಿಗೆ ಮ್ಯಾನ್ಮಾರ್‌ನಲ್ಲಿ ಮತ್ತೊಂದು ಭೂಕಂಪ ಸಂಭವಿಸಿದ್ದು, 4.3 ತೀವ್ರತೆ ದಾಖಲಾಗಿದೆ. 90 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರವು ಮಾಹಿತಿ ನೀಡಿದೆ.

ಇನ್ನು ಕಳೆದ ಭಾನುವಾರ (ಅಕ್ಟೋಬರ್​ 15 ರಂದು) ದೆಹಲಿ ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಫರಿದಾಬಾದ್‌ನಲ್ಲಿ ಸಂಜೆ 4.8 ರ ಸುಮಾರಿಗೆ ರಿಕ್ಟರ್​ ಮಾಪಕದಲ್ಲಿ 3.1 ರಷ್ಟು ತೀವ್ರತೆಯ ಕಂಪನ ದಾಖಲಾಗಿತ್ತು. ಭೂಕಂಪನದ ಕೇಂದ್ರ ಬಿಂದು ಫರಿದಾಬಾದ್‌ನಿಂದ 9 ಕಿಲೋಮೀಟರ್ ಪೂರ್ವಕ್ಕೆ ಮತ್ತು ದೆಹಲಿಯಿಂದ 30 ಕಿಲೋಮೀಟರ್ ಆಗ್ನೇಯದಲ್ಲಿತ್ತು. ಭೂಮಿ ನಡುಗಿದ ಕೂಡಲೇ ಜನರು ಆತಂಕಗೊಂಡು ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದರು.

ಇದನ್ನೂ ಓದಿ :ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ : ವಿಡಿಯೋ

ಹಾಗೆಯೇ, ಅಕ್ಟೋಬರ್​ 3 ರಂದು ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ ಪ್ರಬಲ 6.2 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಪರಿಣಾಮ ದೆಹಲಿ ಎನ್‌ಸಿಆರ್‌, ಉತ್ತರ ಪ್ರದೇಶದ ನೋಯ್ಡಾದಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಹಾಗೆಯೇ, ಅಂದು ಮಧ್ಯಾಹ್ನ 2.24ಕ್ಕೆ ಮತ್ತೊಮ್ಮೆ ಭೂಮಿ ಕಂಪಿಸಿದ್ದು, 10 ಕಿಲೋ ಮೀಟರ್​ ಆಳದಲ್ಲಿ ರಿಕ್ಟರ್​ ಮಾಪನದಲ್ಲಿ 4.6 ತೀವ್ರತೆಯ ಕಂಪನ ದಾಖಲಾಗಿತ್ತು.

ಇದನ್ನೂ ಓದಿ :ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ.. ನಲುಗಿದ ಕಠ್ಮಂಡು

ABOUT THE AUTHOR

...view details